ಧೋನಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ಸಿಎಸ್ ಕೆ ಸಿಇಒ

ಬುಧವಾರ, 12 ಆಗಸ್ಟ್ 2020 (13:24 IST)
ಚೆನ್ನೈ: ಧೋನಿಗೆ ಇದುವೇ ಕೊನೆಯ ಐಪಿಎಲ್ ಆಗಿರಬಹುದೇ ಎಂದು ಅನುಮಾನದಲ್ಲಿರುವ ಅಭಿಮಾನಿಗಳಿಗೆ ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕಾಶಿ ವಿಶ್ವನಾಥನ್ ಗುಡ್ ನ್ಯೂಸ್ ಕೊಟ್ಟಿದ್ದಾರೆ.


ಧೋನಿ ಪ್ರಾಯಶಃ 2022 ರವರೆಗೂ ಐಪಿಎಲ್ ಆಡಲಿದ್ದಾರೆ ಎಂದು ಅವರು ಹೇಳಿದ್ದಾರೆ. ಟೀಂ ಇಂಡಿಯಾದಲ್ಲಂತೂ ಧೋನಿ ಆಟ ನೋಡುವ ಭಾಗ್ಯವಿಲ್ಲ. ಕನಿಷ್ಠ ಐಪಿಎಲ್ ನಲ್ಲಾದರೂ ಅವರ ಆಟವನ್ನು ಇನ್ನೂ ಎರಡು ವರ್ಷ ಎಂಜಾಯ್ ಮಾಡಬಹುದು ಎಂದು ಅಭಿಮಾನಿಗಳು ಸಂತೋಷಪಡಬಹುದು.

ಧೋನಿ ಬಗ್ಗೆ ನಾವು ಚಿಂತೆ ಮಾಡುತ್ತಿಲ್ಲ. ಅವರು ಬಹುಶಃ ನಮ್ಮೊಂದಿಗೆ ಇನ್ನೂ ಎರಡು ವರ್ಷ ಇರುತ್ತಾರೆ ಎಂದು ಕಾಶಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ