ವಿರಾಟ್ ಕೊಹ್ಲಿ ಜತೆಗೆ ಈ ಕನ್ನಡ ನಟನಿಗೆ ಡಿಮ್ಯಾಂಡ್ ಮಾಡಿದ ರಾಜಸ್ಥಾನ್ ರಾಯಲ್ಸ್!

ಮಂಗಳವಾರ, 11 ಆಗಸ್ಟ್ 2020 (12:44 IST)
ಬೆಂಗಳೂರು: ಐಪಿಎಲ್ ಆರಂಭವಾದಾಗಿನಿಂದಲೂ ವಿರಾಟ್ ಕೊಹ್ಲಿ ಆರ್ ಸಿಬಿ ಜತೆಗೇ ಇದ್ದಾರೆ. ಆದರೆ ಈಗ ರಾಜಸ್ಥಾನ್ ರಾಯಲ್ಸ್ ತಂಡ ನಾವು ಕೊಹ್ಲಿಯನ್ನು ಖರೀದಿಸಲು ಬಯಸುವುದಾಗಿ ಹೇಳಿಕೊಂಡಿದೆ! ಹಾಗಂತ ಆರ್ ಸಿಬಿ ಅಭಿಮಾನಿಗಳು ಶಾಕ್ ಆಗಬೇಕಿಲ್ಲ.


ಕೊಹ್ಲಿಯನ್ನು ಖರೀದಿಸುತ್ತೀರಾ ಎಂದು ರಾಜಸ್ಥಾನ್ ತಂಡಕ್ಕೆ ಅಭಿಮಾನಿಯೊಬ್ಬರು ಕೇಳಿದ್ದಕ್ಕೆ ಖರೀದಿಸೋಣ ಆದರೆ ಒಂದು ಷರತ್ತು ಎಂದಿದ್ದಾರೆ.

ಆ ಷರತ್ತು ಏನು ಗೊತ್ತಾ? ನಮಗೆ ಕೊಹ್ಲಿ ಜತೆಗೆ ಮಿಸ್ಟರ್ ನಾಗ್ಸ್ ಕೂಡಾ ಬೇಕು ಎಂದಿದ್ದಾರೆ. ಕನ್ನಡ ನಟ ಡ್ಯಾನಿಶ್ ಸೇಠ್ ಮಿಸ್ಟರ್ ನಾಗ್ಸ್ ಆಗಿ ಆರ್ ಸಿಬಿ ಜತೆಗೇ ತಮಾಷೆಯ ಕಾರ್ಯಕ್ರಮಗಳ ಮೂಲಕ ತಂಡದ ಪರ ಪ್ರಚಾರ ಮಾಡುತ್ತಾರೆ. ಅವರ ಈ ಕಾರ್ಯಕ್ರಮ ಭಾರೀ ಹಿಟ್ ಆಗಿದೆ. ಹೀಗಾಗಿ ಅವರನ್ನೂ ಕೊಹ್ಲಿ ಜತೆಗೇ ಖರೀದಿಸಲು ಬಯಸುತ್ತದಂತೆ ರಾಜಸ್ಥಾನ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ