ಏಕ ದಿನ ಪಂದ್ಯಗಳಲ್ಲಿ 350 ಔಟ್ ಮಾಡಿದ ಪ್ರಥಮ ಭಾರತೀಯ ಕೀಪರ್ ಧೋನಿ

ಬುಧವಾರ, 15 ಜೂನ್ 2016 (19:31 IST)
ಕಿರು ಓವರುಗಳ ಪಂದ್ಯಗಳ ನಾಯಕ ಧೋನಿ ಏಕ ದಿನ ಅಂತಾರಾಷ್ಟ್ರೀಯ ಕ್ರಿಕೆಟ್‌‌ನಲ್ಲಿ  350 ಔಟ್‌ಗಳನ್ನು ಪೂರ್ಣಗೊಳಿಸಿದ ಪ್ರಥಮ ಭಾರತೀಯ ವಿಕೆಟ್‌ಕೀಪರ್ ಮತ್ತು ವಿಶ್ವದಲ್ಲಿ ನಾಲ್ಕನೇ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 


 ರಾಂಚಿ ಸ್ಟಂಪರ್ ಇಂದು ಜಿಂಬಾಬ್ವೆ ವಿರುದ್ಧ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ   ಜಸ್ಪ್ರೀತ್ ಬುಮ್ರಾ ಬೌಲಿಂಗ್‌ನಲ್ಲಿ ಚಿಗುಂಬರಾ ಅವರ ಕ್ಯಾಚ್ ಹಿಡಿದು  ಮೇಲಿನ ಸಾಧನೆಯನ್ನು ಮಾಡಿದರು. 278ನೇ ಪಂದ್ಯಗಳನ್ನಾಡಿದ ಧೋನಿ 261 ಕ್ಯಾಚ್‌ಗಳನ್ನು ಹಿಡಿದು 89 ಸ್ಟಂಪ್ ಔಟ್‌ಗಳನ್ನು ಮಾಡಿದ್ದಾರೆ.

ಶ್ರೀಲಂಕಾದ ಕುಮಾರ್ ಸಂಗಕ್ಕರಾ 482 ಔಟ್‌ಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಅವರ ಬೆನ್ನಹಿಂದೆ ಆಸ್ಟ್ರೇಲಿಯಾದ ಗಿಲ್‌ಕ್ರಿಸ್ಟ್ ಮತ್ತು ದಕ್ಷಿಣ ಆಫ್ರಿಕಾದ ಮಾರ್ಕ್ ಬೌಚರ್ 472 ಮತ್ತು 424 ಔಟ್‌‍ಗಳನ್ನು ಕ್ರಮವಾಗಿ ಮಾಡಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ