ಮೆಂಟರ್ ಆಗಲು ಕೂಡಲೇ ಒಪ್ಪಿರಲಿಲ್ಲ ಧೋನಿ!

ಶನಿವಾರ, 11 ಸೆಪ್ಟಂಬರ್ 2021 (09:28 IST)
ಮುಂಬೈ: ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡಕ್ಕೆ ಧೋನಿ ಮೆಂಟರ್ ಆಯ್ಕೆಯಾಗಿದ್ದು ಎಲ್ಲರ ಖುಷಿಗೆ ಕಾರಣವಾಗಿದೆ. ಆದರೆ ಧೋನಿ ಅಷ್ಟು ಬೇಗ ತಂಡಕ್ಕೆ ವಾಪಸ್ ಬರಲು ಒಪ್ಪಿರಲಿಲ್ಲ!


ಮೊದಲು ಧೋನಿ ಈ ಆಫರ್ ನ್ನು ಒಪ್ಪಿರಲಿಲ್ಲ. ಅವರಿಗೆ ಕೊಂಚ ಹಿಂಜರಿಕೆಯಿತ್ತು. ಆದರೆ ಕೊನೆಗೆ ತಮ್ಮದೇ ಸಮಯ ತೆಗೆದುಕೊಂಡು ಒಪ್ಪಿದರಂತೆ.

ವಿರಾಟ್ ಕೊಹ್ಲಿಗೆ ಧೋನಿ ಜೊತೆ ಇರುವ ಗೌರವ, ಹೊಂದಾಣಿಕೆ ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ನಿರ್ಧಾರಕ್ಕೆ ಬಂದಿತ್ತು. ಧೋನಿಗೆ ಇದು ಸೂಕ್ತವೋ ಎನ್ನುವ ಅನುಮಾನವಿತ್ತು. ಕೊನೆಗೆ ಬಿಸಿಸಿಐ ಮಾತನ್ನು ತೆಗೆದು ಹಾಕಲಾಗದೇ ಒಪ್ಪಿದರು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ