ಅಂತಿಮ ಟೆಸ್ಟ್ ರದ್ದಾಗಿದ್ದರಿಂದ ಇಂಗ್ಲೆಂಡ್ ಗೆ ಆದ ನಷ್ಟವೆಷ್ಟು ಗೊತ್ತಾ?!

ಶುಕ್ರವಾರ, 10 ಸೆಪ್ಟಂಬರ್ 2021 (16:17 IST)
ಲಂಡನ್: ಮ್ಯಾಂಚೆಸ್ಟರ್ ನಲ್ಲಿ ನಡೆಯಬೇಕಿದ್ದ ಭಾರತ-ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ರದ್ದುಗೊಂಡಿದೆ. ಆದರೆ ಇದರಿಂದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಭಾರೀ ನಷ್ಟವಾಗಿದೆ.


ಈ ಒಂದು ಪಂದ್ಯ ಕೊನೆಯ ಕ್ಷಣದಲ್ಲಿ ರದ್ದಾಗಿದ್ದರಿಂದ ಇಂಗ್ಲೆಂಡ್ ಮಂಡಳಿ ಬರೋಬ್ಬರಿ 200 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದೆ ಎನ್ನಲಾಗಿದೆ.

ಹೀಗಾಗಿಯೇ ಬಿಸಿಸಿಐ ಈ ನಷ್ಟ ಭರಿಸಲು ಮತ್ತೊಮ್ಮೆ  ಈಪಂದ್ಯವನ್ನು ಇನ್ನೊಂದು ದಿನ ಆಯೋಜಿಸುವ ಪ್ರಸ್ತಾಪವನ್ನು ಇಸಿಬಿ ಮುಂದಿಟ್ಟಿದೆ. ಆದರೆ ಇದು ಯಾವಾಗ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ