ವಿರಾಟ್ ಕೊಹ್ಲಿ ಬೆಳವಣಿಗೆಯಿಂದ ಮಾರುಹೋದ ದಿನೇಶ್ ಕಾರ್ತಿಕ್

ಶುಕ್ರವಾರ, 17 ಜೂನ್ 2016 (19:37 IST)
ಭಾರತದ ಮಾಜಿ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಆಟವನ್ನು ಮನಸಾರೆ ಮೆಚ್ಚಿದ್ದು ಕೊಹ್ಲಿ ಸುಧಾರಣೆಯಾದ ವಿಧಾನ ಕಂಡು ಮಾರುಹೋಗಿದ್ದಾಗಿ ಹೇಳಿದ್ದಾರೆ.  ಕಾರ್ತಿಕ್ ಈ ವರ್ಷ ಐಪಿಎಲ್ ಗುಜರಾತ್ ಲಯನ್ಸ್ ತಂಡವನ್ನು ಪ್ರತಿನಿಧಿಸಿದ್ದು,  ಪ್ಲೇ ಆಫ್‌ನಲ್ಲಿ ಈ ತಂಡವು ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ತಂಡಕ್ಕೆ ಸೋತಿತ್ತು. ಕಾರ್ತಿಕ್ ಈ ಮುಂಚೆ ಆರ್‌ಸಿಬಿಯಲ್ಲಿದ್ದಾಗ ಮತ್ತು ಟೀಂ ಇಂಡಿಯಾದಲ್ಲಿದ್ದಾಗ ಕೊಹ್ಲಿ ಜತೆ ಡ್ರೆಸ್ಸಿಂಗ್ ರೂಂ ಶೇರ್ ಮಾಡಿಕೊಂಡಿದ್ದು, ಕೊಹ್ಲಿಯ ಪ್ರಸಕ್ತ ಅಚ್ಚರಿಯ ಬೆಳವಣಿಗೆ ಕುರಿತು ಮಾರು ಹೋಗಿದ್ದಾರೆ. 
 
ವಿರಾಟ್ ಕೊಹ್ಲಿ ಕುರಿತು ನೀವು ಮಾತನಾಡುವಾಗ ಅದಕ್ಕೆ ಮಿತಿಯೇ ಇರುವುದಿಲ್ಲ. ಅವರು ಕ್ರಿಕೆಟರ್ ಆಗಿ ಮಾನವ ಜೀವಿಯಾಗಿ ಬೆಳೆದ ರೀತಿಯಿಂದ ನಾನು ಮಾರುಹೋಗಿದ್ದೇನೆ.  ಅವರು ಉಳಿದವರಿಗಿಂತ ಮೇಲ್ಮಟ್ಟದಲ್ಲಿ ಏಳ್ಗೆ ಹೊಂದಿರುವುದು ನೋಡಿ ಸಂತೋಷವಾಗುತ್ತದೆ ಎಂದು ಕ್ರಿಕೆಟ್ ವೆಬ್‌ಸೈಟ್‍ವೊಂದಕ್ಕೆ ಹೇಳಿದರು.
 
ನನಗೆ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗದಿದ್ದರೂ ನನ್ನ ವೃತ್ತಿಜೀವನ ರೂಪುಗೊಂಡ ರೀತಿಯ ಬಗ್ಗೆ ಸಂತೋಷವಾಗಿದೆ. ನನ್ನ ಕ್ರಿಕೆಟ್ ಜೀವನದಲ್ಲೂ ಏರುಪೇರುಗಳಿದ್ದು, ಇದು ಕ್ರೀಡಾಪಟುವಿನ ಭಾಗವಾಗಿದ್ದು ಅದಕ್ಕೆ ವಿಷಾದವಿಲ್ಲ ಎಂದು ಕಾರ್ತಿಕ್ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ