ಕೆಟ್ಟವನೋ, ಒಳ್ಳೆಯವನೋ ಒಟ್ನಲ್ಲಿ ಜನ ನನ್ನ ಬಗ್ಗೆ ಮಾತಾಡ್ತಿರ್ತಾರೆ ಎಂದ ದಿನೇಶ್ ಕಾರ್ತಿಕ್

ಭಾನುವಾರ, 26 ಮೇ 2019 (08:51 IST)
ಲಂಡನ್: ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ದಿನೇಶ್ ಕಾರ್ತಿಕ್ ಆಯ್ಕೆ ಬಗ್ಗೆ ಹಲವರು ಅಪಸ್ವರವೆತ್ತಿದ್ದರು. ಈ ಬಗ್ಗೆ ಅವರು ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.


ಸದಾ ಟೀಂ ಇಂಡಿಯಾದಲ್ಲಿ ಎಲ್ಲರೂ ಪ್ರಶ್ನೆ ಮಾಡುವುದು ದಿನೇಶ್ ಕಾರ್ತಿಕ್ ಆಯ್ಕೆ ಬಗ್ಗೆಯೇ ಎನ್ನುವುದು ವಿಶೇಷ. ಅಷ್ಟೇನೂ ಹೇಳಿಕೊಳ್ಳುವಂತಹ ಇನಿಂಗ್ಸ್ ಆಡಿಲ್ಲ, ವಿಕೆಟ್ ಕೀಪಿಂಗ್ ನಲ್ಲೂ ದೊಡ್ಡ ಸಾಧನೆಯೇನೂ ಮಾಡಿಲ್ಲ. ಹಾಗಿದ್ದರೂ ತಂಡಕ್ಕೆ ಯಾಕೆ ಆಯ್ಕೆಯಾಗುತ್ತಾರೆ. ಅವರ ಬದಲು ರಿಷಬ್ ಪಂತ್ ಗೆ ಸ್ಥಾನ ನೀಡಬಹುದಿತ್ತು ಎಂದೆಲ್ಲಾ ಭಾರೀ ಚರ್ಚೆಗಳಾಗಿದ್ದವು.

ಈ ಬಗ್ಗೆ ಪ್ರತಿಕ್ರಿಯಿಸಿರುವ ದಿನೇಶ್ ಕಾರ್ತಿಕ್ ನಾನು ಒಳ್ಳೆಯ ಆಟಗಾರ ಹೌದೋ ಅಲ್ವೋ ಆದರೆ ಜನ ಯಾವತ್ತೂ ನನ್ನ ಬಗ್ಗೆಯೇ ಮಾತಾಡುತ್ತಿರುತ್ತಾರೆ ಎಂದಿದ್ದಾರೆ. ಇಷ್ಟು ವರ್ಷಗಳವರೆಗೂ ತಂಡದ ಭಾಗವಾಗಲು ಸಾಧ್ಯವಾಗಿದ್ದು ಅದೃಷ್ಟ ಎಂದೇ ಭಾವಿಸುತ್ತೇನೆ ಎಂದು ಕಾರ್ತಿಕ್ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ