ದಿನೇಶ್ ಕಾರ್ತಿಕ್ ಟೀಂ ಇಂಡಿಯಾ ವಿಶ್ವಕಪ್ ತಂಡದಲ್ಲಿ ಯಾಕಿರಬೇಕು? ಇಲ್ಲಿದೆ ಉತ್ತರ
 
ಹೀಗಾಗಿ ಸಹಜವಾಗಿಯೇ ಅವರನ್ನು ಮುಂಬರುವ ಟಿ20 ವಿಶ್ವಕಪ್ ಆಡಲಿರುವ ಟೀಂ ಇಂಡಿಯಾಗೆ ಆಯ್ಕೆ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ.
									
				ದಿನೇಶ್ ಈಗ ಆಡುವ ಪರಿ ನೋಡಿದರೆ ಪ್ರತಿಷ್ಠಿತ ಟೂರ್ನಿಯಲ್ಲಿ ಭಾರತ ತಂಡಕ್ಕೆ ಉತ್ತಮ ಫಿನಿಶರ್ ಆಗಿ ಕೊಡುಗೆ ನೀಡಬಲ್ಲರು. ಇದರಿಂದಾಗಿ ಏಳನೇ ಕ್ರಮಾಂಕದವರೆಗೂ ಬ್ಯಾಟಿಂಗ್ ಸದೃಢವಾಗುತ್ತದೆ. ಜೊತೆಗೆ ಟೀಂ ಇಂಡಿಯಾದಲ್ಲಿ ಅನುಭವಿಗಳ ಕೊರತೆಯಿದೆ. ಬ್ಯಾಟಿಂಗ್ ನಲ್ಲಿ ರೋಹಿತ್, ಕೊಹ್ಲಿ, ಕೆಎಲ್ ರಾಹುಲ್ ಬಿಟ್ಟರೆ ಉಳಿದ ಬ್ಯಾಟಿಗರಿಗೆ ವಿಶ್ವಕಪ್ ಆಡಿದ ಅನುಭವವಿಲ್ಲ. ಹೀಗಾಗಿ ಕಾರ್ತಿಕ್ ಆಯ್ಕೆಯಾಗಬೇಕು ಎಂಬ ಕೂಗು ಬಲವಾಗಿ ಕೇಳಿಬರುತ್ತಿದೆ.