ಐಪಿಎಲ್ 2022: ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿರುವ ಕೆಕೆಆರ್

ಸೋಮವಾರ, 9 ಮೇ 2022 (08:40 IST)
ಮುಂಬೈ: ಐಪಿಎಲ್ 2022 ರಲ್ಲಿ ಇಂದು ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕೊತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡಯಲಿದೆ.

ಕೋಲ್ಕೊತ್ತಾ ತಂಡ ಆರಂಭಿಕ ಪಂದ್ಯಗಳಲ್ಲಿ ಗೆದ್ದರೂ ಬಳಿಕ ಸತತವಾಗಿ ಸೋಲು ಕಾಣುತ್ತಾ ಬಂದಿದೆ. ವಿಶೇಷವಾಗಿ ಬ್ಯಾಟಿಂಗ್ ದಯನೀಯ ವೈಫಲ್ಯ ಕೆಕೆಆರ್ ಗೆ ಮುಳುವಾಗಿದೆ.

ಇತ್ತ ಮುಂಬೈ ಇಂಡಿಯನ್ಸ್ ಸತತವಾಗಿ ದಾಖಲೆಯ ಸೋಲು ಕಂಡು ಇದೀಗ ಕಳೆದ  ಎರಡು ಪಂದ್ಯಗಳಿಂದ ಗೆಲುವು ಕಂಡಿದ್ದು, ಹೊಸ ಭರವಸೆಯಲ್ಲಿದೆ. ಹೀಗಾಗಿ ಇಂದಿನ ಪಂದ್ಯ ಸಮಬಲರ ಹೋರಾಟ ಎನ್ನಬಹುದು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ