ಆಸ್ಟ್ರೇಲಿಯಾ ವಿರುದ್ಧ ಮೈ ಮರೆತು ಆಡಬೇಡಿ ಎಂದು ಟೀಂ ಇಂಡಿಯಾಕ್ಕೆ ಕಿವಿ ಮಾತು ಹೇಳಿದ ಸಚಿನ್ ತೆಂಡುಲ್ಕರ್
ನಮ್ಮದು ವಿಶ್ವದಲ್ಲೇ ಶ್ರೇಷ್ಠ ಕ್ಷೇತ್ರ ರಕ್ಷಕರಿರುವ ತಂಡ. ಅದು ನಮಗೆ ಸಮಸ್ಯೆಯೇ ಅಲ್ಲ. ನನಗೆ ಗೊತ್ತು ನಮ್ಮ ತಂಡ ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ತಯಾರಾಗಲಿದೆ. ಆದರೂ ಆಸ್ಟ್ರೇಲಿಯಾ ಹಿಂದಿನಷ್ಟು ಸ್ಟ್ರಾಂಗ್ ಆಗಿಲ್ಲ ಎನ್ನುವ ಕಾರಣಕ್ಕೆ ಹಗುರವಾಗಿ ಕಾಣುವಂತಿಲ್ಲ ಎಂದು ಸಚಿನ್ ಹೇಳಿಕೊಂಡಿದ್ದಾರೆ.