ದುಲೀಪ್ ಟ್ರೋಫಿ: ಚೆಂಡು ತಾಗಿ ಕುಸಿದು ಬಿದ್ದ ಪ್ರಗ್ಯಾನ್ ಓಜಾ

ಗುರುವಾರ, 8 ಸೆಪ್ಟಂಬರ್ 2016 (14:53 IST)
ಇಂಡಿಯಾ ಗ್ರೀನ್ ಪರ ಆಡುತ್ತಿರುವ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಕ್ಷೇತ್ರರಕ್ಷಣೆ ಮಾಡುವಾಗ ತಲೆಯ ಹಿಂಭಾಗಕ್ಕೆ ಚೆಂಡು ತಾಗಿ ಕುಸಿದು ಬಿದ್ದರು.
ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಇಂಡಿಯಾ ಗ್ರೀನ್ ಪರ ಆಡುತ್ತಿರುವ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ತಲೆ ಹಿಂಭಾಗಕ್ಕೆ ಕಿವಿಯ ಬಳಿ ಚೆಂಡು ಬಡಿದು ಕ್ರೀಡಾಂಗಣದಲ್ಲೇ ಕುಸಿದು ಬಿದ್ದ ಘಟನೆ ನಡೆದಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ. 
 
ಶ್ರೇಯಸ್ ಗೋಪಾಲ್ ಎಸೆದ ಚೆಂಡನ್ನು ಇಂಡಿಯಾ ಬ್ಲ್ಯೂ ತಂಡದ ಪರ ಬ್ಯಾಟಿಂಗ್ ಮಾಡುತ್ತಿದ್ದ ಪಂಕಜ್ ಸಿಂಗ್ ಮಿಡ್-ಆನ್ ಕಡೆ ಹೊಡೆದರು. ಓಜಾ ಆ ಚೆಂಡನ್ನು ಹಿಡಿಯಲು ಹೋದಾಗ ಅದು ಅವರ ಕಿವಿ ಹತ್ತಿರ ಬಡಿಯಿತು. 
 
ರಭಸದಿಂದ ಚೆಂಡು ಬಲವಾಗಿಯೇ ಬಡಿದಿದ್ದರಿಂದ ಓಜಾ ತಕ್ಷಣ ಕುಸಿದು ಬಿದ್ದರು. ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಅವರನ್ನು ತಕ್ಷಣ ಅವರನ್ನು ಸ್ಟ್ರೆಚರ್ ಮೂಲಕ ಮೈದಾನದಿಂದ ಸಾಗಿಸಿ ಸಮೀಪದಲ್ಲಿದ್ದ ಆಸ್ಪತ್ರೆಗೆ ಸಾಗಿಸಲಾಯಿತು.
 
ಪಂದ್ಯವನ್ನು ಮುಂದುವರೆಸಲಾಯಿತು. ಆದರೆ ಮೈದಾನದಲ್ಲಿ ಆತಂಕ ಮನೆ ಮಾಡಿತ್ತು. ಓಜಾ ಸ್ಥಿತಿ ಹೇಗಿದೆ ಎಂದು ಎಲ್ಲರೂ ಕಳವಳಗೊಂಡಿದ್ದರು.
 
ಸದ್ಯ ಅವರ ಸ್ಥಿತಿ ಉತ್ತಮವಾಗಿದ್ದು 24 ಗಂಟೆ ನಿಗಾವಣೆಯಲ್ಲಿಡಲಾಗಿದೆ ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ