ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ ಅಲೆಸ್ಟರ್ ಕುಕ್

ಸೋಮವಾರ, 3 ಸೆಪ್ಟಂಬರ್ 2018 (17:24 IST)
ಸೌಥಾಂಪ್ಟನ್: ಟೀಂ ಇಂಡಿಯಾ ವಿರುದ್ಧ ಟೆಸ್ಟ್ ಸರಣಿ ಗೆದ್ದ ಬೆನ್ನಲ್ಲೇ ಇಂಗ್ಲೆಂಡ್ ತಂಡಕ್ಕೆ ಅಲೆಸ್ಟರ್ ಕುಕ್ ರೂಪದಲ್ಲಿ ಆಘಾತ ಸಿಕ್ಕಿದೆ.
 

ಮಾಜಿ ನಾಯಕ, ಹಿರಿಯ ಕ್ರಿಕೆಟಿಗ ಅಲೆಸ್ಟರ್ ಕುಕ್ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಕಳೆದ ಕೆಲವು ಪಂದ್ಯಗಳಿಂದ ಕುಕ್ ಬ್ಯಾಟಿಂಗ್ ಕಳೆಗುಂದಿತ್ತು. ಈ ಹಿನ್ನಲೆಯಲ್ಲಿ ಅವರಿಗೆ ತಂಡದಿಂದ ಕೊಕ್ ನೀಡಬಹುದೆಂಬ ಸುದ್ದಿಯಿತ್ತು. ಇದರ ಬೆನ್ನಲ್ಲೇ ಕುಕ್ ನಿವೃತ್ತಿ ಘೋಷಿಸಿದ್ದಾರೆ.

2006 ರಲ್ಲಿ ಟೆಸ್ಟ್ ಕ್ರಿಕೆಟ್ ಪದಾರ್ಪಣೆ ಮಾಡಿದ್ದ ಕುಕ್ 32 ಶತಕಗಳೊಂದಿಗೆ 12,254 ರನ್ ಗಳಿಸಿದ್ದಾರೆ. ಕಳೆದ ತಿಂಗಳಲ್ಲೇ ಭಾರತ ವಿರುದ್ಧದ ಸರಣಿ ನಂತರ ವಿದಾಯ ಘೋಷಿಸಲು ತೀರ್ಮಾನಿಸಿದ್ದೆ ಎಂದು ಕುಕ್ ಹೇಳಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದವರ ಪೈಕಿ ಇಂಗ್ಲೆಂಡ್ ಆಟಗಾರರಲ್ಲಿ ಕುಕ್ ನಂ.1 ಸ್ಥಾನದಲ್ಲಿದ್ದರೆ, ವಿಶ್ವ ಬ್ಯಾಟ್ಸ್ ಮನ್ ಗಳ ಪೈಕಿ ಆರನೇ ಸ್ಥಾನದಲ್ಲಿದ್ದಾರೆ. ಇದೀಗ ಈ ಪ್ರತಿಭಾವಂತ ಆಟಗಾರನ ವೃತ್ತಿ ಜೀವನ ಕೊನೆಗೊಂಡಿರುವುದು ಕ್ರಿಕೆಟ್ ‍ ಪ್ರೇಮಿಗಳಿಗೆ ಬೇಸರ ತಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.      

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ