ಶತಕ ಗಳಿಸಿದರೂ ಕೆಎಲ್ ರಾಹುಲ್ ರನ್ನು ಲೇವಡಿ ಮಾಡುವುದನ್ನು ಬಿಡದ ಅಭಿಮಾನಿಗಳು
ಶತಕ ಗಳಿಸಿದ ಮೇಲೂ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ರಾಹುಲ್ ಲೇವಡಿ ಮಾಡಿದ್ದಾರೆ. ಅಂತೂ ಶತಕ ಗಳಿಸಿ ಮುಂದಿನ ಎರಡು ವರ್ಷಗಳಿಗೆ ತಂಡದಲ್ಲಿ ಸ್ಥಾನ ಭದ್ರಗೊಳಿಸಿದರು ಎಂದು ಕೆಲವರು ವ್ಯಂಗ್ಯ ಮಾಡಿದರೆ ಇನ್ನು ಕೆಲವರು ವಿರಾಟ್ ಕೊಹ್ಲಿಯನ್ನು ಸಂತೃಪ್ತಿಗೊಳಿಸಲು ಯಶಸ್ವಿಯಾದರು ಎಂದು ಟಾಂಗ್ ಕೊಟ್ಟಿದ್ದಾರೆ.
ಐದನೇ ಶತಕ ಗಳಿಸಿದ ರಾಹುಲ್ ಅಪರೂಪದ ದಾಖಲೆಯನ್ನೂ ಮಾಡಿದ್ದಾರೆ. ವಿದೇಶದಲ್ಲಿ ಪಂದ್ಯದ ನಾಲ್ಕನೇ ಇನಿಂಗ್ಸ್ ನಲ್ಲಿ ಶತಕ ಗಳಿಸಿದ ಭಾರತೀಯ ಆಟಗಾರರ ಪೈಕಿ ಸುನಿಲ್ ಗವಾಸ್ಕರ್ ನಂತರ ಎರಡನೇ ಆಟಗಾರ ಎನಿಸಿಕೊಂಡರು. ಗವಾಸ್ಕರ್ 1979 ರಲ್ಲಿ ಇದೇ ಓವಲ್ ಮೈದಾನದಲ್ಲಿ 221 ರನ್ ಗಳಿಸಿದ್ದರು. ಇಂದು ಅದೇ ಮೈದಾನದಲ್ಲಿ ಮತ್ತೆ ರಾಹುಲ್ ದ್ವಿತೀಯ ಇನಿಂಗ್ಸ್ ಶತಕ ಗಳಿಸಿದ್ದು ವಿಶೇಷವಾಗಿತ್ತು.