ಮೊದಲು ಕಾಶ್ಮೀರ, ಬಳಿಕ ಭಾರತವನ್ನು ಆಕ್ರಮಿಸುತ್ತೇವೆ: ಪಾಕ್ ವೇಗಿ ಶೊಯೇಬ್ ಅಖ್ತರ್

ಶುಕ್ರವಾರ, 25 ಡಿಸೆಂಬರ್ 2020 (10:35 IST)
ಇಸ್ಲಾಮಾಬಾದ್: ಮೊದಲು ಕಾಶ್ಮೀರವನ್ನು ನಮ್ಮದಾಗಿಸುತ್ತೇವೆ. ಬಳಿಕ ಇಡೀ ಭಾರತವನ್ನೇ ಆಕ್ರಮಿಸುತ್ತೇವೆ ಎಂದು ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿರುವ ಹಳೆಯ ವಿಡಿಯೋವೊಂದು ಈಗ ವೈರಲ್ ಆಗಿದೆ.


‘ಗಾಝ್ವಾ ಇ-ಹಿಂದ್’ ಎಂಬ ಧಾರ್ಮಿಕ ನೀತಿ ನಿಯಮಾವಳಿಗಳನ್ನು ಉಲ್ಲೇಖಿಸಿ ಶೊಯೇಬ್ ಇಂತಹದ್ದೊಂದು ಹೇಳಿಕೆ ನೀಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ‘ಗಾಝ್ವಾ ಇ-ಹಿಂದ್ ನಮ್ಮ ಪವಿತ್ರ ಗ್ರಂಥಗಳಲ್ಲಿ ಉಲ್ಲೇಖಿಸಿದೆ. ಮೊದಲು ಕಾಶ್ಮೀರವನ್ನು ವಶಪಡಿಸುತ್ತೇವೆ. ಬಳಿಕ ಗಾಝ್ವಾ ಇ-ಹಿಂದ್ ಗಾಗಿ ಭಾರತವನ್ನೇ ಆಕ್ರಮಿಸುತ್ತೇವೆ’ ಎಂದು ಈ ವಿಡಿಯೋದಲ್ಲಿ ಅವರು ಹೇಳುತ್ತಾರೆ. ಇದೀಗ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ