ಟೀಂ ಇಂಡಿಯಾ 36 ರನ್ ಗೆ ಆಲೌಟ್ ಆಗಿದ್ದಕ್ಕೆ ಪಾಕ್ ವೇಗಿ ಶೊಯೇಬ್ ಅಖ್ತರ್ ಸಂತಸ

ಶನಿವಾರ, 19 ಡಿಸೆಂಬರ್ 2020 (16:48 IST)
ಅಡಿಲೇಡ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಕನಿಷ್ಠ ಮೊತ್ತಕ್ಕೆ ಆಲೌಟ್ ಆಗಿ ಬೇಡದ ದಾಖಲೆ ಮಾಡಿದ್ದಕ್ಕೆ ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಗೆ ಸಂತಸವಾಗಿದೆಯಂತೆ!


ಅಷ್ಟಕ್ಕೂ ಅಖ್ತರ್ ಸಂತೋಷ ವ್ಯಕ್ತಪಡಿಸಿದ್ದು ಯಾಕೆ ಗೊತ್ತಾ? ಇದುವರೆಗೆ ಈ ದಾಖಲೆ ಪಾಕ್ ಹೆಸರಿನಲ್ಲಿತ್ತು. 2013 ರಲ್ಲಿ ದ. ಆಫ್ರಿಕಾ ವಿರುದ್ಧ ಪಾಕ್ ತಂಡ 43 ರನ್ ಗಳಿಗೆ ಆಲೌಟ್ ಆಗಿದ್ದೇ ಇದುವರೆಗಿನ ಕನಿಷ್ಠ ಮೊತ್ತದ ದಾಖಲೆಯಾಗಿತ್ತು. ಆ ದಾಖಲೆಯನ್ನು ಟೀಂ ಇಂಡಿಯಾ ಈಗ ಅಳಿಸಿ ಹಾಕಿತು ಎಂದು ಅಖ್ತರ್ ಗೆ ಸಂತಸವಾಗಿದೆಯಂತೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ