5000 ಮಕ್ಕಳ ಹಸಿವು ನೀಗಿಸಲು ಐಪಿಎಲ್ ನಲ್ಲಿ ದುಡಿಯುತ್ತಿದ್ದೇನೆ ಎಂದ ಗೌತಮ್ ಗಂಭೀರ್

ಶನಿವಾರ, 4 ಜೂನ್ 2022 (16:57 IST)
ನವದೆಹಲಿ: ಸಂಸದನಾಗಿದ್ದರೂ ಐಪಿಎಲ್ ನಲ್ಲಿ ಸಕ್ರಿಯರಾಗಿರುವುದಕ್ಕೆ ಕ್ರಿಕೆಟಿಗ ಗೌತಮ್ ಗಂಭೀರ್ ಟೀಕೆಗೊಳಗಾಗುತ್ತಾರೆ. ಈ ಬಗ್ಗೆ ಟೀಕೆಗಳಿಗೆ ಅವರು ತಕ್ಕ ಉತ್ತರ ಕೊಟ್ಟಿದ್ದಾರೆ.

ಐಪಿಎಲ್ ನಲ್ಲಿ ಕಾಮೆಂಟೇಟರ್ ಆಗಿ, ಮೆಂಟರ್ ಆಗಿ ಗಂಭೀರ್ ಕಾರ್ಯನಿರ್ವಹಿಸುತ್ತಾರೆ. ಸಂಸದನಾಗಿದ್ದುಕೊಂಡು ಜನಸೇವೆ ಮಾಡುವುದು ಬಿಟ್ಟು ಕ್ರಿಕೆಟ್ ಲೀಗ್ ನಲ್ಲಿ ಭಾಗವಹಿಸುವುದು ಯಾಕೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಗಂಭೀರ್, ನಾನು 5000 ಮಕ್ಕಳ ಹಸಿವು ನೀಗಿಸಲು ಐಪಿಎಲ್ ನಲ್ಲಿ ಕೆಲಸ ಮಾಡುತ್ತೇನೆ ಎಂದಿದ್ದಾರೆ.

ಗಂಭೀರ್ ತಮ್ಮ ಟ್ರಸ್ಟ್ ಮೂಲಕ ಬಡಮಕ್ಕಳಿಗೆ ಸಹಾಯ ಮಾಡುವುದು ಎಲ್ಲರಿಗೂ ಗೊತ್ತೇ ಇದೆ. ಈಗ ಐಪಿಎಲ್ ನ ಭಾಗವಾಗಿರುವುದೂ ಅದೇ ಕಾರಣಕ್ಕೆ ಎಂದಿದ್ದಾರೆ. ನಮ್ಮ ಮನೆಯಲ್ಲಿ ಹಣದ ಗಿಡ ನೆಟ್ಟಿಲ್ಲ. ನಾನು ಬಡಮಕ್ಕಳಿಗೆ ನೆರವಾಗಬೇಕೆಂದರೆ ಹಣ ಸಂಪಾದನೆ ಮಾಡಲೇಬೇಕು. ನಾನು ಐಪಿಎಲ್ ನಲ್ಲಿ ಕಾಮೆಂಟರಿ ಮಾಡಿ ಗಳಿಸಿದ ಹಣದಿಂದ 5000 ಮಕ್ಕಳ ಹಸಿವು ನೀಗಿಸುತ್ತೇನೆ ಎಂದು ಗಂಭೀರ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ