ರವಿಶಾಸ್ತ್ರಿ ಕೋಚ್ ಆದ ಹಿಂದಿನ ರಹಸ್ಯ ಬಿಚ್ಚಿಟ್ಟ ಗಂಗೂಲಿ!

ಗುರುವಾರ, 27 ಜುಲೈ 2017 (09:36 IST)
ಮುಂಬೈ: ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿ ಆಯ್ಕೆ ಮಾಡುವಾಗ ಹಲವು ಗೊಂದಲಗಳು ಉಂಟಾಗಿದ್ದವು. ಅಂತೂ ಶಾಸ್ತ್ರಿಗೆ ಈ ಪಟ್ಟ ಒಲಿದಿತ್ತು. ರವಿ ಶಾಸ್ತ್ರಿಯನ್ನು ಕೋಚ್ ಆಗಿ ನೇಮಕ ಮಾಡಲು ಯಾರು ಕಾರಣ ಎಂಬುದನ್ನು ಕ್ರಿಕೆಟ್ ಸಲಹಾ ಸಮಿತಿ ಸದಸ್ಯರಾದ ಸೌರವ್ ಗಂಗೂಲಿ ರಹಸ್ಯ ಬಿಚ್ಚಿಟ್ಟಿದ್ದಾರೆ.


ರವಿಶಾಸ್ತ್ರಿ ಕೊಹ್ಲಿ ಮೆಚ್ಚಿನ ಅಭ್ಯರ್ಥಿಯಾಗಿದ್ದರು ಎಂಬ ಸುದ್ದಿ ಆ ಸಂದರ್ಭದಲ್ಲಿ ಹಬ್ಬಿತ್ತು. ಅದು ನಿಜ ಎಂದು ಗಂಗೂಲಿ ಒಪ್ಪಿಕೊಂಡಿದ್ದಾರೆ. ರವಿಶಾಸ್ತ್ರಿ ವಿರಾಟ್ ಕೊಹ್ಲಿಯ ಆಯ್ಕೆಯಾಗಿದ್ದರು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ.

‘ಕೊನೆಗೂ ಕೊಹ್ಲಿಗೆ ಬೇಕಾಗಿದ್ದು ಸಿಕ್ಕಿದೆ. ಕೊಹ್ಲಿಗೆ ಶಾಸ್ತ್ರಿಯೇ ಕೋಚ್ ಆಗಿ ಬೇಕಾಗಿತ್ತು. ರವಿಶಾಸ್ತ್ರಿ ಕೊಹ್ಲಿ ಆಯ್ಕೆ. ಬಹುಶಃ ಕೊಹ್ಲಿಗೆ ಈಗ ಖುಷಿಯಾಗಿರಬಹುದು. ಅವರಿಗೆ ವಿಶ್ ಮಾಡೋಣ. ಮುಂದಿನ ವಿಶ್ವಕಪ್ ಗೆ ಎರಡು ವರ್ಷವಿದೆ.  ಅವರಿಬ್ಬರೂ ಆ ನಿಟ್ಟಿನಲ್ಲಿ ಒಳ್ಳೆ ಕೆಲಸ ಮಾಡುತ್ತಾರೆಂದು ಆಶಿಸೋಣ’ ಎಂದು ಗಂಗೂಲಿ ರಹಸ್ಯ ಬಿಡಿಸಿದ್ದಾರೆ.

ಅಷ್ಟಕ್ಕೂ ರವಿಶಾಸ್ತ್ರಿ ಕೊಹ್ಲಿಯ ಮೆಚ್ಚಿನ ಅಭ್ಯರ್ಥಿಯಾಗಿದ್ದರು ಎಂಬ ಸುದ್ದಿಯೇನೋ ಹಿಂದೆಯೇ ಕೇಳಿ ಬಂದಿತ್ತು. ಆದರೆ ಯಾರೂ ಅದನ್ನು ಬಹಿರಂಗವಾಗಿ ಒಪ್ಪಿಕೊಂಡಿರಲಿಲ್ಲ. ಗಂಗೂಲಿ ಈಗ ಅದನ್ನೇ ಮಾಡಿದ್ದಾರೆ.

ಇದನ್ನೂ ಓದಿ..  ಪ್ರಧಾನಿ ಮೋದಿ-ಅಮಿತ್ ಶಾ ಜುಗಲ್ ಬಂದಿಗೆ ಉರುಳಿತೇ ಮಹಾಘಟಬಂಧನ್?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ