ಶಾಹಿದ್ ಅಫ್ರಿದಿಯನ್ನು ಮಾನಸಿಕ ತಜ್ಞರ ಬಳಿ ಕರೆದೊಯ್ಯಬೇಕು ಎಂದ ಗೌತಮ್ ಗಂಭೀರ್
ಇದೀಗ ಅಫ್ರಿದಿಗೆ ತಿರುಗೇಟು ನೀಡಿರುವ ಗಂಭೀರ್ ಮೊದಲು ಅಫ್ರಿದಿಯನ್ನು ಮಾನಸಿಕ ರೋಗ ತಜ್ಞರ ಬಳಿ ಕರೆದೊಯ್ಯಬೇಕು ಎಂದಿದ್ದಾರೆ. ಟ್ವಿಟರ್ ನಲ್ಲಿ ಶಾಹಿದ್ ಅಫ್ರಿದಿಯನ್ನು ಟ್ಯಾಗ್ ಮಾಡಿ ಕಾಮೆಂಟ್ ಮಾಡಿರುವ ಗಂಭೀರ್ ಈಗಲೂ ನಾವು ಪಾಕಿಸ್ತಾನಕ್ಕೆ ವೈದ್ಯಕೀಯ ವೀಸಾ ನೀಡುತ್ತಿದ್ದೇವೆ. ನೀವು ಇಲ್ಲಿಗೆ ಬಂದರೆ ನಾನೇ ನಿಮ್ಮನ್ನು ಮಾನಸಿಕ ತಜ್ಞರ ಬಳಿ ಕರೆದೊಯ್ಯುವೆ ಎಂದು ವ್ಯಂಗ್ಯ ಮಾಡಿದ್ದಾರೆ.