ಗೌತಮ್ ಗಂಭೀರ್ ರ ಉಚಿತ ಊಟ ಯೋಜನೆ ಮುಂದೆ ‘ಅಪ್ಪಾಜಿ’, ‘ಅಮ್ಮ’ ಕ್ಯಾಂಟೀನ್ ಲೆಕ್ಕಕ್ಕೇ ಇಲ್ಲ!
ಕ್ಯಾಂಟೀನ್ ಆರಂಭಿಸಿದ ಮೊದಲ ದಿನ ಸ್ವತಃ ಗಂಭೀರ್ ತಾವೇ ಊಟ ಬಡಿಸಿದ್ದಾರೆ. ಟ್ವಿಟರ್ ನಲ್ಲಿ ಈ ಬಗ್ಗೆ ಫೋಟೋ ಹಾಕಿರುವ ಗಂಭೀರ್ ‘ನನ್ನ ಹೃದಯದಲ್ಲಿ ಸಹಾನುಭೂತಿ, ಕೈಯಲ್ಲಿ ಒಂದು ಪ್ಲೇಟ್ ತುಟಿಯಲ್ಲಿ ಪ್ರಾರ್ಥನೆ, ಯಾರೂ ಹಸಿವಿನಿಂದ ಮಲಗಬೇಡಿ’ ಎಂದು ಸಂದೇಶ ಬರೆದಿದ್ದಾರೆ. ಕ್ರಿಕೆಟಿಗನ ಈ ಮಾನವೀಯ ಕೆಲಸಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದೆ.