ಗೌತಮ್ ಗಂಭೀರ್ ಗೆ ಅಮಾನತಿನ ಶಿಕ್ಷೆ!

ಭಾನುವಾರ, 18 ಜೂನ್ 2017 (06:36 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಗೌತಮ್ ಗಂಭೀರ್ ಗೆ ದೇಶೀಯ ಪಂದ್ಯಗಳಿಂದ ನಾಲ್ಕು ಪಂದ್ಯಗಳಿಗೆ ಅಮಾನತು ಶಿಕ್ಷೆ ನೀಡಲಾಗಿದೆ.

 
ವಿಜಯ್ ಹಜಾರೆ ಟ್ರೋಫಿ ವೇಳೆ ದೆಹಲಿ ತಂಡದ ಕೋಚ್ ಕೆಪಿ ಬಾಸ್ಕರ್ ಜತೆ ವಾಗ್ವಾದ ನಡೆಸಿದ್ದ ಗಂಭೀರ್ ನಂತರ ಸಾರ್ವಜನಿಕವಾಗಿ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಅವರು ದೆಹಲಿಯ ಪ್ರತಿಭಾವಂತ ಯುವ ಕ್ರಿಕೆಟಿಗರ ಭವಿಷ್ಯ ಹಾಳು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಈ ಪ್ರಕರಣದ ಕುರಿತಂತೆ ಕೋಚ್ ನೀಡಿದ್ದ ದೂರಿನ ವಿಚಾರಣೆ ನಡೆಸಿದ ಜಸ್ಟಿಸ್ ವಿಕ್ರಮಜಿತ್ ಸೇನ್ ನೇತೃತ್ವದ ಸಮಿತಿ ಗಂಭೀರ್ ಗೆ ಮುಂದಿನ ಋತುವಿನ ಆರಂಭದ ನಾಲ್ಕು ದೇಶೀಯ ಪಂದ್ಯಗಳನ್ನು ಆಡದಂತೆ ನಿಷೇಧ ಹೇರಿದೆ. ಗಂಭೀರ್ ಮಾಡಿರುವ ಅಪರಾಧ ‘ಒಪ್ಪತಕ್ಕದ್ದಲ್ಲ’ ಮತ್ತು ‘ಗಂಭೀರ’ವಾದುದು. ಭವಿಷ್ಯದಲ್ಲಿ ಇಂತಹ ತಪ್ಪನ್ನು ಯಾರೂ ಮಾಡದಂತೆ ಈ ಶಿಕ್ಷೆ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದೆ.

http://kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ