ಕ್ರಿಕೆಟ್ ನ ‘ಡಾನ್’ ಬ್ರಾಡ್ಮನ್ ಗೆ ಗೂಗಲ್ ಗೌರವ
ಇನ್ನು, ಕ್ರಿಕೆಟ್ ದಿಗ್ಗಜನ ಹುಟ್ಟುಹಬ್ಬಕ್ಕೆ ಕ್ರಿಕೆಟ್ ಜಗತ್ತೇ ಶುಭಾಶಯ ಕೋರುತ್ತಿದೆ. ಆಸ್ಟ್ರೇಲಿಯಾ ಮೂಲದ ಬ್ರಾಡ್ಮನ್ 1908 ರಲ್ಲಿ ಜನಿಸಿದ್ದರು. ಇದು ಅವರ 110 ನೇ ಜನ್ಮ ದಿನ. ಅಂದಿನ ಕಾಲದಲ್ಲೇ ಕ್ರಿಕೆಟ್ ನ ಹಲವು ದಾಖಲೆಗಳನ್ನು ಮಾಡಿ ಡಾನ್ ಎನಿಸಿಕೊಂಡಿದ್ದ ಬ್ರಾಡ್ಮನ್ ಹುಟ್ಟುಹಬ್ಬಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ವಿಶೇಷವಾಗಿ ಶುಭ ಕೋರಿದ್ದಾರೆ.
ಬ್ರಾಡ್ಮನ್ ನ ಉತ್ತರಾಧಿಕಾರಿ ಎಂದೇ ಬಿಂಬಿತವಾಗಿದ್ದ ಸಚಿನ್ ತಾವು ಅವರ 90 ನೇ ಜನ್ಮ ದಿನದಂದು ಭೇಟಿ ಮಾಡಿದ ಕ್ಷಣವನ್ನು ಮೆಲುಕು ಹಾಕಿದ್ದಾರೆ. ಅವರನ್ನು, ಅವರ ಭೇಟಿಯ ಕ್ಷಣಗಳನ್ನು ಇಂದಿಗೂ ಸ್ಮರಿಸುವೆ ಎಂದು ಸಚಿನ್ ಟ್ವೀಟ್ ಮಾಡಿದ್ದಾರೆ.