ಆಂಡ್ರ್ಯೂ ಸೈಮಂಡ್ಸ್ ನಿಧನದಿಂದ ಆಘಾತಕ್ಕೊಳಗಾದ ಹರ್ಭಜನ್ ಸಿಂಗ್

ಭಾನುವಾರ, 15 ಮೇ 2022 (09:18 IST)
ಮುಂಬೈ: ಆಸ್ಟ್ರೇಲಿಯಾ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್ ರಸ್ತೆ ಅಪಘಾತದಲ್ಲಿ ನಿಧನರಾಗಿರುವುದಕ್ಕೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಹರ್ಭಜನ್ ಮತ್ತು ಸೈಮಂಡ್ಸ್ ನಡುವೆ ನಡೆದಿದ್ದ ಮಂಕಿಗೇಟ್ ವಿವಾದ ಬಹುಚರ್ಚಿತ ವಿಷಯವಾಗಿತ್ತು. ಮೈದಾನದಲ್ಲಿ ಇಬ್ಬರೂ ವೈಷಮ್ಯ ಬೆಳೆಸಿಕೊಂಡಿದ್ದರು.

ಇದೀಗ ಸೈಮಂಡ್ಸ್ ರಸ್ತೆ ಅಪಘಾತದಲ್ಲಿ ನಿಧನರಾದ ಸುದ್ದಿ ತಿಳಿದು ಪ್ರತಿಕ್ರಿಯಿಸಿರುವ ಹರ್ಭಜನ್ ಸಿಂಗ್ ‘ಆಂಡ್ರ್ಯೂ ಸೈಮಂಡ್ಸ್ ದಿಡೀರ್ ನಮ್ಮನ್ನೆಲ್ಲಾ ಬಿಟ್ಟು ಹೋಗಿರುವುದು ನನಗೆ ತೀವ್ರ ಆಘಾತ ತಂದಿದೆ. ಬೇಗನೇ ಅಗಲಿದರು. ಅವರ ಸ್ನೇಹಿತರು, ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ನೀಡಲಿ. ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಭಜಿ ಆಘಾತ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ