ನವದೆಹಲಿ: ಕ್ರಿಕೆಟಿಗ ಹರ್ಭಜನ್ ಸಿಂಗ್ ಹಿಂದಿ ಹೇರಿಕೆ ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ಟ್ವಿಟರ್ ನಲ್ಲಿ ಅಭಿಮಾನಿ ಜತೆ ಈ ವಿಚಾರವಾಗಿ ಭಜಿ ಜಟಾಪಟಿ ನಡೆಸಿದ್ದಾರೆ.
ಇದೆಲ್ಲಾ ಪ್ರಾರಂಭವಾಗಿದ್ದು ವಿರಾಟ್ ಕೊಹ್ಲಿ ಹಾಕಿದ ಒಂದು ಫೋಟೋದಿಂದ. ನಾನೊಂದು ಹೊಸ ಸ್ಪೀಕರ್ ಕೊಂಡು ಕೊಂಡೆ ಎಂದು ಕೊಹ್ಲಿ ಫೋಟೋ ಹಾಕಿದ್ದರು. ಇದಕ್ಕೆ ಇಂಗ್ಲಿಷ್ ನಲ್ಲಿ ಪ್ರತಿಕ್ರಿಯಿಸಿದ್ದ ಭಜಿ ಸೆಂಡ್ ಮಿ ಒನ್ ಎಂದಿದ್ದರು.
ಭಜಿ ಇಂಗ್ಲಿಷ್ ನಲ್ಲಿ ಪ್ರತಿಕ್ರಿಯಿಸಿದ್ದನ್ನು ನೋಡಿ ಸುಗೇಶ್ ಪಥಿ ಎಂಬಾತ ಕೊನೆಗೂ ನೀವು ಇಂಗ್ಲಿಷ್ ನಲ್ಲಿ ಪೋಸ್ಟ್ ಮಾಡಿದಿರಿ ಎಂದಿದ್ದ. ಇದನ್ನು ನೋಡಿ ಕೆರಳಿದ ಭಜಿ, ಈ ಇಂಗ್ಲಿಷ್ ಜಿ ಯನ್ನು ನೋಡಿದ್ದೀರಾ? ಹಿಂದಿಯಲ್ಲಿ ಮಾತನಾಡುವುದಕ್ಕೆ ನಾಚಿಕೆಯೇ? ನಿಮಗೆ ನಾಚಿಕೆಯಾಗಬೇಕು ಎಂದು ಬೈದಿದ್ದಾರೆ.
ನಂತರ ತಿಳಿದುಬಂದಿದ್ದೇನೆಂದರೆ, ಈ ವ್ಯಕ್ತಿ ಚೆನ್ನೈಮೂಲದವನು. ಈತನಿಗೆ ಹಿಂದಿ ಬರುತ್ತಿರಲಿಲ್ಲ. ಹೀಗಾಗಿ ಈ ಸಂಭಾಷಣೆಯೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.