ಪಂದ್ಯ ಗೆಲ್ಲಿಸಿದರೂ ಹಾರ್ದಿಕ್ ಪಾಂಡ್ಯಗೆ ಟೀಕೆ ತಪ್ಪಲಿಲ್ಲ
ಟೀಂ ಇಂಡಿಯಾ ಜೆರ್ಸಿ ತೊಟ್ಟು ಆಡುತ್ತಿದ್ದ ಹಾರ್ದಿಕ್ ಕೈಗೆ ಮುಂಬೈ ಇಂಡಿಯನ್ಸ್ ತಂಡದ ಗ್ಲೌಸ್ ಹಾಕಿಕೊಂಡಿದ್ದರು. ಇಷ್ಟೇ ಸಾಕಾಯಿತು ಟ್ವಿಟರಿಗರಿಗೆ. ಟೀಂ ಇಂಡಿಯಾ ಪರ ಆಡುವಾಗಲೂ ಮುಂಬೈ ತಂಡದ ಗ್ಲೌಸ್ ಹಾಕಲು ಕಾರಣವೇನು ಎಂದು ಒಬ್ಬರು ಕೇಳಿದರೆ ಇನ್ನೊಬ್ಬರು ದಿಲ್ ಸೇ ಇಂಡಿಯನ್ ಮುಂಬೈ ಇಂಡಿಯನ್ ಎಂದು ಕಾಲೆಳೆದಿದ್ದಾರೆ. ಅಂತೂ ಅಷ್ಟೆಲ್ಲಾ ಕಷ್ಟಪಟ್ಟ ಮೇಲೂ ಪಾಂಡ್ಯಗೆ ತಮಾಷೆ ತಪ್ಪಲಿಲ್ಲ.