ಆಸ್ಟ್ರೇಲಿಯಾ ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್

ಗುರುವಾರ, 21 ಫೆಬ್ರವರಿ 2019 (16:10 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧ ಭಾನುವಾರದಿಂದ ಆರಂಭವಾಗಲಿರುವ ಟಿ20 ಮತ್ತು ಏಕದಿನ ಸರಣಿಯಿಂದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಗಾಯದ ಕಾರಣದಿಂದ ಔಟ್ ಆಗಿದ್ದಾರೆ.


ವಿಶ್ವಕಪ್ ಗೆ ಅರ್ಹತಾ ಸರಣಿ ಎಂದೇ ಪರಿಗಣಿತವಾಗಿರುವ ಆಸೀಸ್ ಸರಣಿಯಿಂದ ಪಾಂಡ್ಯ ಹೊರ ಹೋಗಿರುವುದು ಅವರಿಗೆ ದೊಡ್ಡ ಮಟ್ಟಿನ ಹೊಡೆತವೇ ಸರಿ. ಪಾಂಡ್ಯ ಸ್ಥಾನಕ್ಕೆ ರವೀಂದ್ರ ಜಡೇಜಾರನ್ನು ಕರೆಸಿಕೊಳ್ಳಲಾಗಿದೆ.

ಪಾಂಡ್ಯ ಬೆನ್ನು ನೋವಿಗೆ ತುತ್ತಾಗಿದ್ದು, ಎರಡು ಟಿ20 ಮತ್ತು ಐದು ಏಕದಿನ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇದಕ್ಕೂ ಮೊದಲು ನ್ಯೂಜಿಲೆಂಡ್ ಸರಣಿಯಲ್ಲಿ ಪಾಂಡ್ಯ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅದಕ್ಕೂ ಮೊದಲು ಮಹಿಳೆಯರ ಮೇಲಿನ ಅಸಭ್ಯ ಕಾಮೆಂಟ್ ಗಾಗಿ ಕ್ರಿಕೆಟ್ ನಿಂದ ನಿಷೇಧಕ್ಕೂ ಒಳಗಾಗಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ