ಜಹೀರ್ ಖಾನ್ ಗೆ ಅವಮಾನ ಮಾಡಿದ ಹಾರ್ದಿಕ್ ಪಾಂಡ್ಯಗೆ ಬೆವರಿಳಿಸಿದ ಟ್ವಿಟರಿಗರು

ಬುಧವಾರ, 9 ಅಕ್ಟೋಬರ್ 2019 (07:30 IST)
ಮುಂಬೈ: ಟೀಂ ಇಂಡಿಯಾ ಮಾಜಿ ವೇಗಿ ಜಹೀರ್ ಖಾನ್ ಎಂದರೆ ಕ್ರಿಕೆಟ್ ಜಗತ್ತಿನಲ್ಲಿ ವಿಶೇಷ ಸ್ಥಾನ ಮಾನವಿದೆ. ಆದರೆ ಇಂತಹ ಹಿರಿಯ ಆಟಗಾರನಿಗೆ ಅವಮಾನವಾಗುವಂತೆ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮಾಡಿದ ಟ್ವೀಟ್ ಒಂದು ಟ್ವಿಟರಿಗರ ಕೆಂಗಣ್ಣಿಗೆ ಗುರಿಯಾಗಿದೆ.


ಜಹೀರ್ ಖಾನ್ ಜನ್ಮದಿನಕ್ಕೆ ಶುಭ ಕೋರಿದ ಹಾರ್ದಿಕ್ ‘ಹ್ಯಾಪಿ ಬರ್ತ್ ಡೇ ಜ್ಯಾಕ್. ನನ್ನ ಹಾಗೆ ನೀವೂ ಭರ್ಜರಿ ಸೆಲೆಬ್ರೇಷನ್ ಮಾಡಿದ್ದೀರಿ ಎಂದುಕೊಂಡಿದ್ದೇನೆ’ ಎಂದು ಟ್ವೀಟ್ ಮಾಡಿದ್ದರು.

ಆದರೆ ಜಹೀರ್ ಸಾಧನೆಯನ್ನೂ ಪರಿಗಣಿಸದೇ ಹಾರ್ದಿಕ್ ಇಷ್ಟು ಹಗುರವಾಗಿ ಟ್ವೀಟ್ ಮಾಡಿದ್ದು ಟ್ವಿಟರಿಗರ ಕೆಂಗಣ್ಣಿಗೆ ಗುರಿಯಾಗಿದೆ. ಹಣ, ಹೆಸರು ಬೇಗನೇ ಬಂದರೆ ಜನ ಹೀಗೇ ಆಡೋದು ಎಂದು ಕೆಲವರು ಜರೆದರೆ ಮತ್ತೆ ಕೆಲವರು ತನಗಿಂತ ಹಿರಿಯ, ಇಷ್ಟೆಲ್ಲಾ ಸಾಧನೆ ಮಾಡಿದ ಕ್ರಿಕೆಟಿಗನೊಂದಿಗೆ ಹೇಗೆ ಮಾತನಾಡಬೇಕು ಎಂದು ಗೊತ್ತಿಲ್ವಾ ಎಂದು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ