ಸಚಿನ್ ‘ಪಾಜಿ’ ಆಗಿದ್ದು ಹೇಗೆ? ಇದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

ಶನಿವಾರ, 15 ಆಗಸ್ಟ್ 2020 (12:23 IST)
ನವದೆಹಲಿ: ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ರನ್ನು ಕ್ರಿಕೆಟಿಗರು ‘ಪಾಜಿ’ ಎಂದೇ ಗೌರವಯುತವಾಗಿ ಸಂಬೋಧಿಸುತ್ತಾರೆ. ಅಷ್ಟಕ್ಕೂ ಸಚಿನ್ ರನ್ನು ಹೀಗೆ ಕರೆಯಲು ಕಾರಣವೇನು ಎಂಬುದನ್ನು ಮಾಜಿ ವೇಗಿ ಆಶಿಷ್ ನೆಹ್ರಾ ಬಹಿರಂಗಪಡಿಸಿದ್ದಾರೆ.


ಸಚಿನ್ ರನ್ನು ಪಾಜಿ ಎಂದು ಕರೆಯಲು ಆರಂಭಿಸಿದ್ದು, 2003 ವಿಶ್ವಕಪ್ ಪಂದ್ಯಾವಳಿಯ ಪಾಕಿಸ್ತಾನದ ವಿರುದ್ಧದ ಪಂದ್ಯದ ಬಳಿಕ. ಆ ಪಂದ್ಯದಲ್ಲಿ ಸಚಿನ್ ಸಾಂಪ್ರದಾಯಿಕ ಎದುರಾಳಿಗಳನ್ನು ಚೆಂಡಾಡಿದ್ದರು. ಶೊಯೇಬ್ ಅಖ್ತರ್ ಬೌಲಿಂಗ್ ನಲ್ಲಿ ಪಾಯಿಂಟ್ ಕಡೆಗೆ ಹೊಡೆದ ಸಿಕ್ಸರ್ ಇಂದಿಗೂ ಕ್ರಿಕೆಟ್ ಪ್ರಿಯರಿಗೆ ಸ್ಮರಣೀಯ.

ಆ ಪಂದ್ಯ ಮುಗಿದ ಬಳಿಕ ಟೀಂ ಬಸ್ ನಲ್ಲಿ ಹೋಟೆಲ್ ಗೆ ಮರಳುತ್ತಿದ್ದಾಗ ಹರ್ಭಜನ್ ಸಿಂಗ್ ‘ಪಾಜಿ ನಂ.1’ ಎಂದು ಹಾಡು ಹಾಡಲು ಶುರು ಮಾಡಿದರು. ಇದಾದ ಬಳಿಕ ಎಲ್ಲರೂ ಸಚಿನ್ ರನ್ನು ಪಾಜಿ ಎಂದು ಕರೆಯಲು ಶುರು ಮಾಡಿದರು. ಅಲ್ಲಿಯವರೆಗೆ ಕ್ರಿಕೆಟ್ ಗೆ ಕಪಿಲ್ ದೇವ್ ಒಬ್ಬರೇ ಪಾಜಿ ಎನಿಸಿದ್ದರು ಎಂದು ನೆಹ್ರಾ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ