ಭಾರತ-ಆಸ್ಟ್ರೇಲಿಯಾ ಟೆಸ್ಟ್ ಸರಣಿ ಸ್ಥಳಾಂತರ ಪಕ್ಕಾ

ಭಾನುವಾರ, 9 ಆಗಸ್ಟ್ 2020 (10:45 IST)
ಮುಂಬೈ: ಸಾಮಾನ್ಯವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಟೆಸ್ಟ್ ಸರಣಿ ಮೆಲ್ಬೋರ್ನ್ ಮೈದಾನದಲ್ಲಿ ನಡೆಯುತ್ತದೆ. ಆದರೆ ಈ ಬಾರಿ ಕೊರೋನಾ ಅದನ್ನೆಲ್ಲಾ ತಪ್ಪಿಸುವ ಸಾಧ‍್ಯತೆಯಿದೆ.


ಕೊರೋನಾ ಕಾರಣದಿಂದ ಟೆಸ್ಟ್ ಸರಣಿಯನ್ನು ಅಡಿಲೇಡ್ ಅಥವಾ ಪರ್ತ್ ಗೆ ಸ್ಥಳಾಂತರಿಸಬಹುದು ಎಂಬ ಸುದ್ದಿಯಿತ್ತು. ಅದೀಗ ನಿಜವಾಗುವ ಲಕ್ಷಣ ತೋರುತ್ತಿದೆ.

ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪಿಚ್ ಸಿದ್ಧಗೊಳಿಸಲಾಗುತ್ತಿದ್ದು, ಇಲ್ಲಿಯೇ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳು ನಡೆಯಬಹುದು ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ