ನಾನಿನ್ನೂ ಪರಿಪೂರ್ಣವಾಗಿಲ್ಲ ಎಂದ ಉಮೇಶ್ ಯಾದವ್

ಬುಧವಾರ, 28 ಡಿಸೆಂಬರ್ 2016 (12:06 IST)
ನವದೆಹಲಿ: ನಾನು ಇನ್ನೂ ಬೌಲಿಂಗ್ ನಲ್ಲಿ ಪರಿಪೂರ್ಣನಲ್ಲ. ಶೇಕಡಾ 80 ರಷ್ಟು ಮಾತ್ರ ಪಕ್ವತೆ ಪಡೆದಿದ್ದೇನೆ. ವೇಗದ ಬೌಲರ್ ಆಗಿ ಇನ್ನೂ ಸಾಕಷ್ಟು ಮಾಗಬೇಕಿದೆ ಎಂದು ಟೀ ಇಂಡಿಯಾ ವೇಗಿ ಉಮೇಶ್ ಯಾದವ್ ಹೇಳಿಕೊಂಡಿದ್ದಾರೆ.


ಯಶಸ್ವಿಯಾಗಿ ಈ ವರ್ಷ ಮುಗಿಸಿದ ಉಮೇಶ್ ಯಾದವ್ ಐಸಿಸಿ ವರ್ಷದ ತಂಡದಲ್ಲಿ ಸ್ಥಾನ ಪಡೆದ ಹೊರತಾಗ್ಯೂ ಈ ಮಾತಾಡಿದ್ದಾರೆ. “ಈ ವರ್ಷ ಸಾಕಷ್ಟು ಟೆಸ್ಟ್ ಮತ್ತು ಏಕದಿನ ಪಂದ್ಯವಾಡಿದ್ದೇನೆ. 2016 ನೇ ವರ್ಷವನ್ನು ಚೆನ್ನಾಗಿ ಕಳೆದಿದ್ದೇನೆ” ಎಂದು ಟೀಂ ಇಂಡಿಯಾದ ಸಕ್ಸಸ್ ಬೌಲರ್ ಹೇಳಿಕೊಂಡಿದ್ದಾರೆ.

ಈ ವರ್ಷ ಯಾದವ್ 9 ಟೆಸ್ಟ್ ಮತ್ತು 15 ಏಕದಿನ ಪಂದ್ಯವಾಡಿದ್ದು, ತಲಾ 15 ವಿಕೆಟ್ ಪಡೆದಿದ್ದಾರೆ. ಆದರೆ ಈ ಯಶಸ್ಸಿನಿಂದ ಅವರಿಗೆ ತೃಪ್ತಿಯಾಗಿಲ್ಲ ಎಂಬುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ