ನಾನು ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಹಿಂತಿರುಗಿದಾಗ ನನ್ನ ಆಟದ ಸ್ವರೂಪವೇನು ಎಂದು ಕಂಡುಕೊಳ್ಳಲು ನಾನು ಕಾಯುತ್ತಿದ್ದೇನೆ. ನಾನು ಮೈದಾನದಲ್ಲಿದ್ದಾಗ ಶೇ. 120 ಪ್ರದರ್ಶನ ನೀಡುವುದು ನನ್ನ ಗುರಿ. ಆದರೆ ಫಲಿತಾಂಶ ನಮ್ಮ ಕೈಯಲ್ಲಿರುವುದಿಲ್ಲ ಎಂದು ಕೊಹ್ಲಿ ಹೇಳಿದರು. ಇತ್ತೀಚೆಗೆ ಮುಗಿದ ಐಪಿಎಲ್ 2016ರಲ್ಲಿ ಕೊಹ್ಲಿ 943 ರನ್ ಕಲೆಹಾಕಿದ್ದು, ಅತೀ ಹೆಚ್ಚು ರನ್ ಸ್ಕೋರರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಕೊಹ್ಲಿಗೆ ಇನ್ನೂ ಕೆಲವು ಪ್ರಮುಖ ಆಟಗಾರರ ಜತೆ ಜಿಂಬಾಬ್ವೆ ಸರಣಿಗೆ ವಿಶ್ರಾಂತಿ ನೀಡಲಾಗಿದ್ದು, ಎಂ.ಎಸ್. ಧೋನಿ ಜಿಂಬಾಬ್ವೆ ಸರಣಿಯನ್ನು ಮುನ್ನಡೆಸಲಿದ್ದಾರೆ. ಸೀಮಿತ ಓವರುಗಳ ಸರಣಿ ಬಳಿಕ ಭಾರತ ಜುಲೈ 6ರಿಂದ ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿಯನ್ನು ಆಡಲಿದೆ.