ಏಕದಿನ ಕ್ರಿಕೆಟ್ ರ‍್ಯಾಂಕ್‌ನಲ್ಲಿ ಮತ್ತೆ ಅಗ್ರಸ್ಥಾನಕ್ಕೇರಿದ ಭಾರತದ ಹಿಟ್ಟರ್‌ ಶುಭಮನ್ ಗಿಲ್

Sampriya

ಬುಧವಾರ, 19 ಫೆಬ್ರವರಿ 2025 (17:40 IST)
photo Courtesy Instagram
ಮುಂಬೈ: ಭಾರತ ತಂಡದ ಆರಂಭಿಕ ಆಟಗಾರ ಮತ್ತು ಉಪನಾಯಕ ಶುಭಮನ್ ಗಿಲ್ ಬುಧವಾರ ಪ್ರಕಟವಾದ ಐಸಿಸಿ ಏಕದಿನ ರ‍್ಯಾಂಕಿಂಗ್ ನಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ತವರಿನ ಸರಣಿಯಲ್ಲಿ ಎರಡು ಅರ್ಧಶತಕ ಮತ್ತು ಶತಕ ಸೇರಿದಂತೆ ಉತ್ತಮ ಪ್ರದರ್ಶನದ ಪರಿಣಾಮವಾಗಿ ಈ ಸ್ಥಾನಕ್ಕೆ ಏರಿದ್ದಾರೆ.

ಈ ಹಾದಿಯಲ್ಲಿ ಅವರು  ಪಾಕಿಸ್ಥಾನದ ಬಾಬರ್ ಅಜಮ್ ಅವರನ್ನು  ಹಿಂದಿಕ್ಕಿದ್ದಾರೆ. ಶುಮಭನ್‌ ಗಿಲ್‌ 796 ರೇಟಿಂಗ್ ಹೊಂದಿದ್ದಾರೆ. ಭಾರತ ತಂಡದ ನಾಯಕ ರೋಹಿತ್ ಶರ್ಮ ಮೂರನೇ ಸ್ಥಾನದಲ್ಲಿದ್ದಾರೆ.

ಆರನೇ ಸ್ಥಾನದಲ್ಲಿ ಸ್ಟಾರ್‌ ಬ್ಯಾಟರ್‌ ವಿರಾಟ್ ಕೊಹ್ಲಿ ಮತ್ತು ಒಂಬತ್ತನೇ ಸ್ಥಾನದಲ್ಲಿ ಶ್ರೇಯಸ್‌ ಅಯ್ಯರ್‌ ಇದ್ದಾರೆ.

ಭಾರತದ ಮತ್ತೊಬ್ಬ ಬ್ಯಾಟರ್‌ ಶ್ರೇಯಸ್ ಅಯ್ಯರ್, 10 ನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ನ ಶಾಯ್ ಹೋಪ್ ಅವರಿದ್ದಾರೆ. ಕೆಎಲ್ ರಾಹುಲ್ 16 ನೇ ಸ್ಥಾನದಲ್ಲಿದ್ದಾರೆ.

ಶ್ರೀಲಂಕಾದ ಮಹೇಶ್ ತೀಕ್ಷಣ ಬೌಲರ್‌ಗಳ ಏಕದಿನ ರ‍್ಯಾಂಕಿಂಗ್ ನಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. ಅಫ್ಗಾನಿಸ್ತಾನದ ರಶೀದ್‌ ಖಾನ್‌ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಭಾರತದ ಕುಲದೀಪ್ ಯಾದವ್ ನಾಲ್ಕನೇ ಸ್ಥಾನದಲ್ಲಿದ್ದಾರೆ

ತಂಡಗಳ ರ‍್ಯಾಂಕಿಂಗ್ ನಲ್ಲಿ ಭಾರತವೇ ನಂ.1 ಆಗಿದೆ. ಆಸ್ಟ್ರೇಲಿಯ ಮತ್ತು ಪಾಕಿಸ್ಥಾನ ಆ ಬಳಿಕ ಇವೆ. 4 ನೇ ಸ್ಥಾನದಲ್ಲಿ ನ್ಯೂಜಿಲ್ಯಾಂಡ್, 5 ನೇ ಸ್ಥಾನದಲ್ಲಿ ಶ್ರೀಲಂಕಾ ,6 ನೇ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ಇದೆ. 7 ನೇ ಸ್ಥಾನದಲ್ಲಿ ಇಂಗ್ಲೆಂಡ್, 8 ನೇ ಸ್ಥಾನದಲ್ಲಿ ಅಫ್ಘಾನಿಸ್ಥಾನ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ