ನೀವು ಬೌಲಿಂಗ್ ಮಾಡುವಾಗ ಫೀಲ್ಡ್ ಹೇಗೆ ಸೆಟ್ ಮಾಡುತ್ತೀರಿ, ಬ್ಯಾಟ್ಸ್‌ಮನ್ ಬಲವೇನು ಅವರನ್ನು ವಂಚಿಸುವುದು ಹೇಗೆ ಮುಂತಾದುವನ್ನು ಅವರು ಕಲಿಸಿದ್ದು ನನಗೆ ನೆರವಾಯಿತು. ಬಹುಶಃ ಸ್ರಾನ್‌ಗೆ ಕೂಡ ಅದೇ ರೀತಿ ನೆರವಾಗಲು ಪ್ರಯತ್ನಿಸಿದೆ. ಆದರೆ ನೆಹ್ರಾ ಅವರ ಅನುಭವದಿಂದ ಆಡುವ ಆಟ ನನಗೆ ಸಾಧ್ಯವಿಲ್ಲ. ಆದರೆ ಅವರ ಪಾತ್ರವನ್ನು ಅನುಕರಿಸಲು ನಾನು ಪ್ರಯತ್ನಿಸಿದ್ದೇನೆ ಎಂದು ಕುಮಾರ್ ಹೇಳಿದರು.
ಇಂದಿನ ದಿನಗಳಲ್ಲಿ ನೀವು ಫೀಲ್ಡ್ ಸೆಟ್ ಮಾಡುವುದನ್ನು ನೋಡಿ ಬ್ಯಾಟ್ಸ್‌ಮನ್ ಯಾವ ರೀತಿ ಬೌಲ್ ಮಾಡುತ್ತೀರೆಂದು ಊಹಿಸುತ್ತಾರೆ. ಆದರೆ ಎದುರಾಳಿಯನ್ನು ನಾವು ಹೆಚ್ಚು ಅರ್ಥಮಾಡಿಕೊಂಡಂತೆ ನಾವು ಸೆಟ್ ಮಾಡಿದ ಫೀಲ್ಡಿಂಗ್ ವಿರುದ್ಧ ಬೌಲ್ ಮಾಡಲು ಯತ್ನಿಸುತ್ತೇವೆ. ನಾವು ಬ್ಯಾಟ್ಸ್‌ಮನ್‌ನನ್ನು ವಂಚಿಸಿ ರನ್‌ಗಳನ್ನು ನಿಯಂತ್ರಿಸಿ ಔಟ್ ಮಾಡಲು ಪ್ರಯತ್ನಿಸುತ್ತೇವೆ ಎಂದು ಪಂದ್ಯಾವಳಿಯಲ್ಲಿ ಅಗ್ರ ವಿಕೆಟ್ ಗಳಿಸಿ ನೇರಳೆ ಕ್ಯಾಪ್ ಧರಿಸಿದ ಕುಮಾರ್ ಹೇಳಿದರು.