ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರಿಗೆ ತಾವು ಬೌಲಿಂಗ್ ಮಾಡುವುದಾಗಿದ್ದರೆ ಚಿಂತೆ ಮಾಡಬೇಕಿತ್ತು ಎಂದು ಪಾಕಿಸ್ತಾನದ ಲೆಜೆಂಡರಿ ಬೌಲರ್ ವಾಸಿಮ್ ಅಕ್ರಂ ಹೇಳಿದ್ದಾರೆ. ಕಿಂಗ್ ಆಫ್ ಸ್ವಿಂಗ್ ವಾಸಿಂ ಇಂಡಿಯಾ ಟುಡೆ ಜತೆ ಮಾತನಾಡುತ್ತಾ, ಬತ್ತಳಿಕೆಯಲ್ಲಿ ಎಲ್ಲಾ ರೀತಿಯ ಶಾಟ್‌ಗಳನ್ನು ಇಟ್ಟುಕೊಂಡಿರುವ ಕೊಹ್ಲಿಗೆ ಬೌಲಿಂಗ್ ಮಾಡುವುದು ಕಷ್ಟ ಎಂದು ಉದ್ಗರಿಸಿದರು.
ಕೊಹ್ಲಿ ಸಾಮರ್ಥ್ಯ ಮತ್ತು ಅದಕ್ಕಿಂತ ಹೆಚ್ಚಾಗಿ ಅವರ ಬ್ಯಾಟಿಂಗ್ ತಂತ್ರ. ಅವರು ರಿವರ್ಸ್ ಶಾಟ್ ಅಥವಾ ಲ್ಯಾಪ್ ಶಾಟ್ ಹೊಡೆದಿದ್ದನ್ನು ನಾನು ಕಂಡಿಲ್ಲ. ಅವರು ಸದಾ ಸೂಕ್ತ ಕ್ರಿಕೆಟಿಂಗ್ ಶಾಟ್‌ಗಳನ್ನು ಬ್ಯಾಟ್ ಫುಲ್ ಫೇಸ್‌ನಲ್ಲಿ ಆಡುತ್ತಾರೆ. ಆದ್ದರಿಂದ ಅವರು ಸ್ಥಿರ ಬ್ಯಾಟಿಂಗ್ ಆಡುತ್ತಿದ್ದು, ನಾನು ಅವರಿಗೆ ಬೌಲಿಂಗ್ ಮಾಡಿದ್ದರೆ ಚಿಂತೆ ಪಡಬೇಕಿತ್ತು ಎಂದು ಹೇಳಿದರು.