ಮುಸ್ತಫಿಜುರ್‌ಗೆ ಬ್ಯಾಟಿಂಗ್, ಇಂಗ್ಲಿಷ್ ಭಾಷೆಯ ಹೆದರಿಕೆ

ಗುರುವಾರ, 26 ಮೇ 2016 (13:45 IST)
ನವದೆಹಲಿ: ಚೊಚ್ಚಲ ಐಪಿಎಲ್ ಆವೃತ್ತಿಯಲ್ಲಿ ಆಡುತ್ತಿರುವ ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್, ತಮ್ಮ ಮನೋಜ್ಞ ಬೌಲಿಂಗ್ ಮೂಲಕ ಅನೇಕರನ್ನು ಮೆಚ್ಚಿಸಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ ಪರ ಆಡುತ್ತಿರುವ ಬಾಂಗ್ಲಾ ವೇಗಿ ತಂಡಕ್ಕೆ ಡೆತ್ ಓವರುಗಳಲ್ಲಿ ರನ್ ವೇಗ ನಿಯಂತ್ರಿಸುತ್ತಾರೆ. 14 ಪಂದ್ಯಗಳಲ್ಲಿ 16 ವಿಕೆಟ್‌ಗಳಿಂದ, ಪ್ರಸಕ್ತ ಆವೃತ್ತಿಯಲ್ಲಿ ಪ್ರಮುಖ ವಿಕೆಟ್ ಗಳಿಕೆದಾರರಾಗಿದ್ದಾರೆ. 
 
 ಮುಸ್ತಫಿಜುರ್ ಮೈದಾನದಲ್ಲಿ ನಿರ್ಭಯವಾಗಿದ್ದರೂ ಯುವ ಬೌಲರನ್ನು ಕಾಡುವ ಕೆಲವು ವಿಷಯಗಳಿವೆ.  ರೆಹಮಾನ್ ಅವರ ಎಸ್‌ಆರ್‌ಎಚ್ ಟೀಂ ಮೇಟ್ ರಿಕಿ ಭುಯಿ 20 ವರ್ಷ ವಯಸ್ಸಿನ ರೆಹಮಾನ್ ವ್ಯಕ್ತಿತ್ವದ ಬಗ್ಗೆ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮುಸ್ತಫಿಜುರ್ ರೆಹ್ಮಾನ್ ಎರಡು ವಿಷಯಗಳ ಬಗ್ಗೆ ಭಯ ಪಡುತ್ತಾರೆ- ಬ್ಯಾಟಿಂಗ್ ಮತ್ತು ಇಂಗ್ಲೀಷ್ ಮಾತನಾಡುವುದು. ನಾನು ಮತ್ತು ಮುಸ್ತಫಿಜುರ್ ಒಳ್ಳೆಯ ಬಾಂಧವ್ಯ ಹೊಂದಿದ್ದೇವೆ ಎಂದು ಭುಯಿ ಹೇಳಿದರು. ಭುಯಿ ಬೆಂಗಾಲಿಯಲ್ಲಿ ಪರಿಣಿತರಾಗಿದ್ದು, ಮುಸ್ತಫಿಜುರ್‌ಗೆ ತರ್ಜುಮೆದಾರರಾಗಿದ್ದಾರೆ. ತಂಡದ ಕಾರ್ಯತಂತ್ರಗಳನ್ನು ಕುರಿತು ತಾವು ಮುಸ್ತಫಿಜುರ್‌ಗೆ ವಿವರಿಸುವುದಾಗಿ ಅವರು ಹೇಳಿದರು. 
 
ಮೊದಲ 10 ಓವರುಗಳಲ್ಲಿ ಅವರ ಪಾತ್ರ ಅಥವಾ ಉತ್ತರಾರ್ಧದಲ್ಲಿ ಅವರ ಪಾತ್ರವನ್ನು , ಪ್ರತಿಯೊಬ್ಬ ಬ್ಯಾಟ್ಸ್‌ಮನ್‌ಗೆ ಯಾವ ರೀತಿ ಬೌಲ್ ಮಾಡಬೇಕು, ಯಾವ ರೀತಿಯ ಫೀಲ್ಡಿಂಗ್‌ ಇರಬೇಕು ಮುಂತಾದ ಪ್ರತಿಯೊಂದು ವಿವರಗಳನ್ನು ಅವರಿಗೆ ತಿಳಿಸಲಾಗುತ್ತದೆ. ಸ್ಟ್ರಾಟಜಿಕ್ ಟೈಮ್ ಔಟ್‌ನಲ್ಲಿ ವಾರ್ನರ್ ಸೂಚನೆಗಳನ್ನು ಮತ್ತು ಫೀಲ್ಡ್ ಸೆಟ್ಟನ್ನು ನಾನು ಅವರಿಗೆ ಭಾಷಾಂತರಿಸುತ್ತೇನೆ ಎಂದು ಭುಯಿ ಹೇಳಿದರು.
 
 ಎಡ ಗೈ ಆಟಗಾರ ಮೈದಾನದಲ್ಲಿ ಆಟಗಾರರ ಜತೆ ಮಾತನಾಡಲು ಸಂಜ್ಞೆ ಭಾಷೆಯನ್ನು ಬಳಸುತ್ತಾರೆ. ಮಣಿಕಟ್ಟುಗಳನ್ನು ತಿರುಗಿಸುವುದು ನಿಧಾನದ ಎಸೆತವನ್ನು ಸೂಚಿಸುತ್ತದೆ ಮತ್ತು ತಲೆಯತ್ತ ಬೊಟ್ಟು ಮಾಡುವುದು ಬೌನ್ಸರ್ ಹಾಕುವುದಾಗಿ ಕೀಪರ್‌ಗೆ ಸಂಜ್ಞೆ ನೀಡುವುದಾಗಿದೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ