ಐಪಿಎಲ್ ಕ್ವಾಲಿಫೈಯರ್ ಒಂದರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ತಾವು ಆಡಿದ ಜೂಜು ಫಲಪ್ರದವಾಯಿತು ಎಂದು ರಾಯಲ್ ಚಾಲೆಂಜರ್ಸ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಮಾರ್ಮಿಕವಾಗಿ ಹೇಳಿದ್ದಾರೆ. ತಾವು ಬ್ಯಾಟಿಂಗ್ ಆಡುವಾಗ ಕೊಹ್ಲಿ ಸಂದೇಶವನ್ನು ಕಳಿಸಿ, ಅರೆಕಾಲಿಕ ವೇಗಿ ಡ್ವೇನ್ ಸ್ಮಿತ್ ಬೌಲಿಂಗ್ ಬೆನ್ನಟ್ಟುವಂತೆ ಸೂಚಿಸಿದ್ದು, ಈ ಜೂಜು ಫಲ ನೀಡಿತು ಎಂದು ಡಿ ವಿಲಿಯರ್ಸ್ ಹೇಳಿದರು.
ಮೇಲಿನ ಕ್ರಮಾಂಕದ ಆಘಾತಕಾರಿ ಕುಸಿತದ ನಡುವೆಯೂ, ನಾನು ಆಟದ ದಿಕ್ಕನ್ನು ಬದಲಿಸುವ ವಿಶ್ವಾಸದಲ್ಲಿದ್ದೆ. ಚೆಂಡು ತನಗೆ ಚೆನ್ನಾಗಿ ಕಾಣುತ್ತಿದ್ದು, ಅದೊಂದು ಒಳ್ಳೆಯ ಲಕ್ಷಣವಾಗಿತ್ತು ಎಂದು ಡಿವಿಲಿಯರ್ಸ್ ಹೇಳಿದರು.