ಯಜುವೇಂದ್ರ ಚಾಹಲ್-ಧನಶ್ರೀ ವರ್ಮ ದಾಂಪತ್ಯದಲ್ಲಿ ಬಿರುಕು? ಸುಳಿವು ನೀಡಿದ ದಂಪತಿ
ಯಜುವೇಂದ್ರ ಚಾಹಲ್ ತಮ್ಮ ಹೊಸ ಜೀವನ ಸದ್ಯದಲ್ಲೇ ಎಂದು ಬರೆದುಕೊಂಡಿದ್ದರು. ಇದರ ಬೆನ್ನಲ್ಲೇ ಧನಶ್ರೀ ಕೂಡಾ ತಮ್ಮ ಇನ್ ಸ್ಟಾ ಪುಟದಲ್ಲಿ ಧನಶ್ರೀ ಹೆಸರಿನ ಜೊತೆಗಿದ್ದ ಚಾಹಲ್ ಸರ್ ನೇಮ್ ಕೈ ಬಿಟ್ಟಿದ್ದಾರೆ. ಜೊತೆಗೆ ಫೋಟೋ ಒಂದರಲ್ಲಿ ರಾಜಕುಮಾರಿ ಯಾವತ್ತೂ ತನ್ನ ನೋವನ್ನು ಶಕ್ತಿಯಾಗಿ ಬದಲಾಯಿಸುತ್ತಾಳೆ ಎಂದು ಬರೆದುಕೊಂಡಿದ್ದರು.
ಈ ಹಿನ್ನಲೆಯಲ್ಲಿ ಇಬ್ಬರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಆದರೆ ಯಜುವೇಂದ್ರ ಚಾಹಲ್ ಈಗಲೂ ತಮ್ಮ ಇನ್ ಸ್ಟಾಗ್ರಾಂ ಡಿಪಿಯಾಗಿ ಪತ್ನಿ ಜೊತೆಗಿನ ಫೋಟೋವನ್ನೇ ಉಳಿಸಿಕೊಂಡಿದ್ದಾರೆ.