ಎಷ್ಟೇ ಹಸಿವಾದ್ರೂ ಹೊಟ್ಟೆ ತುಂಬಾ ತಿನ್ನಲ್ಲ ವಿರಾಟ್ ಕೊಹ್ಲಿ!
ಕೆಲವು ವರ್ಷಗಳ ಹಿಂದೆ ನಾನು ಸಿಕ್ಕಿದ್ದೆಲ್ಲಾ ತಿನ್ನುತ್ತಿದ್ದೆ. ಆದರೆ ಈಗ ನಾನು ಫಿಟ್ನೆಸ್ ಕಡೆಗೆ ಹೆಚ್ಚು ಗಮನಕೊಡುತ್ತೇನೆ. ಸಂಸ್ಕರಿತ ಸಕ್ಕರೆ,ಗುಲ್ಟನ್ ಸೇವಿಸಲ್ಲ. ಡೈರಿ ಉತ್ಪನ್ನಗಳನ್ನೂ ಆದಷ್ಟು ಅವಾಯ್ಡ್ ಮಾಡುತ್ತೇನೆ. ಎಲ್ಲಕ್ಕಿಂತ ಹೆಚ್ಚಾಗಿ ಎಷ್ಟೇ ಹಸಿವಾದರೂ ಹೊಟ್ಟೆ ತುಂಬಾ ತಿನ್ನಲ್ಲ, ಶೇ.90 ರಷ್ಟು ಮಾತ್ರ ಹೊಟ್ಟೆ ತುಂಬಿಸಿಕೊಳ್ಳುತ್ತೇನೆ ಎಂದಿದ್ದಾರೆ ಕೊಹ್ಲಿ.
ಅಷ್ಟೇ ಅಲ್ಲದೆ, ಪ್ರತಿನಿತ್ಯ ತಮ್ಮ ಜಿಮ್ ನಲ್ಲಿ ಬೆವರು ಹರಿಸುತ್ತಾರಂತೆ. ನನಗೆ ಒಳ್ಳೆಯದಲ್ಲ ಎನ್ನುವ ವಿಚಾರವನ್ನು ಮಾಡಲು ಹೋಗಲ್ಲ. ಇದರಿಂದಾಗಿ ನನ್ನ ದೇಹದಲ್ಲಿ ಉತ್ತಮ ಬದಲಾವಣೆಯಾಗಿದೆ ಎನ್ನುತ್ತಾರೆ ಕೊಹ್ಲಿ.