ಇಶಾಂತ್ ಟೆಸ್ಟ್ ಸರಣಿಯಿಂದ ಔಟ್: ರೋಹಿತ್ ಸ್ಥಿತಿ ಇನ್ನೂ ಅನಿಶ್ಚಿತತೆಯಲ್ಲಿ

ಶುಕ್ರವಾರ, 27 ನವೆಂಬರ್ 2020 (11:09 IST)
ಮುಂಬೈ: ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಿಂದ ವೇಗಿ ಇಶಾಂತ್ ಶರ್ಮಾ ಹೊರಬಿದ್ದಿದ್ದು ರೋಹಿತ್ ಶರ್ಮಾ ಪಾಲ್ಗೊಳ್ಳುವಿಕೆ ಇನ್ನೂ ಅನಿಶ್ಚಿತತೆಯಲ್ಲಿ ಮುಂದುವರಿದಿದೆ.


ಗಾಯಗೊಂಡಿರುವ ಇಬ್ಬರೂ ಆಟಗಾರರು ಈಗ ಪುನಶ್ಚೇತನ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪೈಕಿ ಇಶಾಂತ್ ಸಂಪೂರ್ಣ ಚೇತರಿಸಿಕೊಳ್ಳದೇ ಇರುವುದರಿಂದ ಟೆಸ್ಟ್ ಸರಣಿಯಿಂದ ಹೊರಬಿದ್ದಿರುವುದಾಗಿ ಬಿಸಿಸಿಐ ಪ್ರಕಟಣೆ ತಿಳಿಸಿದೆ. ಆದರೆ ರೋಹಿತ್ ರನ್ನು ಕನಿಷ್ಠ ಕೊನೆಯ ಪಂದ್ಯಗಳಿಗಾದರೂ ಆಸ್ಟ್ರೇಲಿಯಾಗೆ ಕಳುಹಿಸಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ