ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಎಂದರೆ ಚೇತೇಶ್ವರ ಪೂಜಾರಗೂ ಇಷ್ಟ!

ಗುರುವಾರ, 26 ನವೆಂಬರ್ 2020 (10:15 IST)
ಸಿಡ್ನಿ: ಟೀಂ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ ಪೂಜಾರರನ್ನು ರಾಹುಲ್ ದ್ರಾವಿಡ್ ನಂತರದ ವಾಲ್ ಎಂದು ಕರೆಯುವುದಕ್ಕೆ ಕಾರಣ ಅವರು ಆಸ್ಟ್ರೇಲಿಯಾ ವಿರುದ್ಧ ಇದುವರೆಗೆ ಆಡಿರುವ ಇನಿಂಗ್ಸ್ ಗಳು.


ಪೂಜಾರರ ತಾಳ್ಮೆಯ, ಪಕ್ಕಾ ನಿಂತು ಆಡುವ ಆಟ ಆಸ್ಟ್ರೇಲಿಯನ್ನರ ತಾಳ್ಮೆಗೆಡಿಸುತ್ತದೆ. ಬಹುಶಃ ದ್ರಾವಿಡ್ ಕೂಡಾ ಇದೇ ಕಾರಣಕ್ಕೆ ಆಸೀಸ್ ತಂಡಕ್ಕೆ ಕಬ್ಬಿಣದ ಕಡಲೆಯಾಗಿದ್ದರು. ಅವರು ಸಚಿನ್ ಗಿಂತಲೂ ದ್ರಾವಿಡ್ ರನ್ನೇ ಕಠಿಣ ಬ್ಯಾಟ್ಸ್ ಮನ್ ಎಂದುಕೊಳ್ಳುತ್ತಿದ್ದು ಅವರು ಇನಿಂಗ್ಸ್ ಕಟ್ಟುತ್ತಿದ್ದ ರೀತಿಗೆ. ಈಗ ಪೂಜಾರ ಕೂಡಾ ಅದೇ ಕಾರಣಕ್ಕೆ ಆಸ್ಟ್ರೇಲಿಯನ್ನರಿಗೆ ತಲೆನೋವಾಗುತ್ತಾರೆ.

ಪೂಜಾರ ಆಸ್ಟ್ರೇಲಿಯಾ ವಿರುದ್ಧ ಒಂದೇ ಟೆಸ್ಟ್ ಸರಣಿಯಲ್ಲಿ ಮೂರು ಬಾರಿ ಮೂರು ಅಂಕಿಯ ಮೊತ್ತ ಗಳಿಸಿದ್ದಾರೆ. ಈ ಮೂಲಕ ಆಸ್ಟ್ರೇಲಿಯಾ ವಿರುದ್ಧ ಒಂದೇ ಸರಣಿಯಲ್ಲಿ ಅತೀ ಹೆಚ್ಚು ಶತಕ ಗಳಿಸಿದ ಭಾರತೀಯ ಆಟಗಾರರ ಪೈಕಿ ಎರಡನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಠಾನ ವಿರಾಟ್ ಕೊಹ್ಲಿಯದ್ದು. ಅವರು ನಾಲ್ಕು ಶತಕ ಗಳಿಸಿದ್ದಾರೆ. ಒಂದೇ ಪಂದ್ಯದಲ್ಲಿ ಅತೀ ಹೆಚ್ಚು ಬಾಲ್ ಎದುರಿಸಿದ ದಾಖಲೆ ಮತ್ತು ಒಂದೇ ಸರಣಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ವೈಯಕ್ತಿಕ ದಾಖಲೆಯನ್ನೂ ಪೂಜಾರ ಮಾಡಿರುವುದು ಆಸ್ಟ್ರೇಲಿಯಾ ವಿರುದ್ಧವೇ. ಹೀಗಾಗಿ ಅವರಿಗೆ ಆಸ್ಟ್ರೇಲಿಯಾ ವಿರುದ್ಧದ ಪಂದ್ಯವೆಂದರೆ ತವರಿನಲ್ಲಿ ನಡೆಯುತ್ತಿರಲಿ, ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರಲಿ, ಒಂದು ರೀತಿ ಎಕ್ಸ್ ಟ್ರಾ ಉತ್ಸಾಹ ಬರುತ್ತದೆ. ಇದೇ ಕಾರಣಕ್ಕೆ ಆಸ್ಟ್ರೇಲಿಯನ್ನರಿಗೆ ಪೂಜಾರ ಹೊಸ ತಲೆನೋವು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ