ಸಂಜನಾ ಪತಿಯಾದ ಜಸ್ಪ್ರೀತ್ ಬುಮ್ರಾ: ಗೆಳೆಯರು ವಿಶ್ ಮಾಡಿದ್ದು ಹೀಗೆ!
ಇದೀಗ ಖುದ್ದಾಗಿ ಅವರು ತಮ್ಮ ಮದುವೆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ಸಂಜನಾ ಜೊತೆ ಹೊಸ ಬಾಳಿಗೆ ಕಾಲಿಟ್ಟಿರುವುದಾಗಿ ಹೇಳಿದ್ದಾರೆ. ಇನ್ನು, ಬುಮ್ರಾ ಮದುವೆಗೆ ಸಹ ಕ್ರಿಕೆಟಿಗರು ಶುಭ ಕೋರಿದ್ದಾರೆ. ನಿಮಗಿಬ್ಬರಿಗೂ ಶುಭವಾಗಲಿ. ನಮ್ಮ ಪ್ರೀತಿ ನಿಮ್ಮ ಮೇಲಿದೆ ಎಂದು ರಾಹುಲ್ ಹೇಳಿದರೆ, ಹಾರ್ದಿಕ್ ಆರೋಗ್ಯಕರ, ಸಂತೋಷದಾಯಕ ವೈವಾಹಿಕ ಬದುಕು ನಿಮ್ಮದಾಗಲಿ ಎಂದು ಶುಭ ಕೋರಿದ್ದಾರೆ.