ಶಿಖರ್ ಧವನ್ ಔಟ್ ಮಾಡಿ ಸೆಂಡ್ ಆಫ್ ಮಾಡಿದ ಆಫ್ರಿಕಾ ಬೌಲರ್ ಗೆ ಶಿಕ್ಷೆ

ಗುರುವಾರ, 15 ಫೆಬ್ರವರಿ 2018 (08:14 IST)
ಪೋರ್ಟ್ ಎಲಿಜಬೆತ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಐದನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಶಿಖರ್ ಧವನ್ ರನ್ನು ಔಟ್ ಮಾಡಿದ ಮೇಲೆ ಅವಹೇಳನ ಮಾಡಿ ಸೆಂಡ್ ಆಫ್ ಮಾಡಿದ ಆಫ್ರಿಕಾ ಬೌಲರ್ ಕಗಿಸೊ ರಬಾಡಾಗೆ ಐಸಿಸಿ ಶಿಕ್ಷೆ ವಿಧಿಸಿದೆ.
 

ಎಂಟನೇ ಓವರ್ ನಲ್ಲಿ ಶಿಖರ್ ಧವನ್ ರನ್ನು ಔಟ್ ಮಾಡಿದ ಬಳಿಕ ರಬಾಡಾ ಕೈ ಬೀಸಿ ಟಾಟಾ ಮಾಡಿದ್ದಲ್ಲದೆ, ಕೆರಳಿಸುವಂತೆ ಮಾತನಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಐಸಿಸಿ ಒಂದು ಡಿಮೆರಿಟ್ ಅಂಕ ಮತ್ತು ಪಂದ್ಯದ ಸಂಭಾವನೆಯ ಶೇ. 15 ರಷ್ಟನ್ನು ದಂಡದ ರೂಪದಲ್ಲಿ ತೆರಲು ಸೂಚಿಸಿದೆ.

ಇದಕ್ಕೂ ಮೊದಲು ಲಂಕಾ ಸರಣಿಯಲ್ಲಿ ಇದೇ ರೀತಿ ದುರ್ವರ್ತನೆ ತೋರಿ ರಬಾಡಾ ಒಂದು ಪಂದ್ಯದ ನಿಷೇಧ ಶಿಕ್ಷೆಗೊಳಗಾಗಿದ್ದರು. ಮುಂದಿನ 24 ತಿಂಗಳೊಳಗೆ ರಬಾಡಾ ಇದೇ ತಪ್ಪನ್ನು ಎಂಟು ಬಾರಿ ಮಾಡಿದರೆ ಎರಡು ಟೆಸ್ಟ್ ಪಂದ್ಯಗಳ ನಿಷೇಧಕ್ಕೊಳಗಾಗಬೇಕಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ