ಹೊಸ ವರ್ಷದ ಮೊದಲ ದಿನದಂದೇ ಕೆಎಲ್ ರಾಹುಲ್ ಗೆ ಖುಲಾಯಿಸಿತು ಅದೃಷ್ಟ!

ಮಂಗಳವಾರ, 2 ಜನವರಿ 2018 (09:07 IST)
ಕೇಪ್ ಟೌನ್: ಕೆಎಲ್ ರಾಹುಲ್ ಗೆ ಈ ವರ್ಷದ ಮೊದಲ ದಿನವೇ ಶುಭಾರಂಭ ಸಿಕ್ಕಿದೆ. ದ.ಆಫ್ರಿಕಾ ವಿರುಧ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಅವರೇ ಆರಂಭಿಕರಾಗುವುದು ಖಚಿತವಾಗಿದೆ.
 

ಶಿಖರ್ ಧವನ್ ಗಾಯಗೊಂಡಿರುವ ಹಿನ್ನಲೆಯಲ್ಲಿ ರಾಹುಲ್ ಆರಂಭಿಕರಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಅದನ್ನೀಗ ಬಿಸಿಸಿಐ ಸ್ಪಷ್ಟಪಡಿಸಿದೆ. ಧವನ್ ಬದಲಿಗೆ ಬೇರೆ ಆಟಗಾರನಿಗೆ ತಂಡದಲ್ಲಿ ಸ್ಥಾನ ನೀಡಲಾಗಿಲ್ಲ.

ಧವನ್ ಅನುಪಸ್ಥಿತಿಯಲ್ಲಿ ರಾಹುಲ್ ಇನಿಂಗ್ಸ್ ಆರಂಭಿಸಬಹುದು ಎಂದು ಕೋಚ್ ರವಿಶಾಸ್ತ್ರಿ ಕೂಡಾ ಹೇಳಿದ್ದರು. ಅದನ್ನೀಗ ಬಿಸಿಸಿಐ ಕೂಡಾ ಪ್ರಕಟಿಸಿದೆ. ಧವನ್ ಇದ್ದಾಗ ತಂಡದಲ್ಲಿ ಸ್ಥಾನಕ್ಕಾಗಿ ಗುದ್ದಾಡಬೇಕಿದ್ದ ರಾಹುಲ್ ಗೆ ಈ ಮೂಲಕ ಮೊದಲ ದಿನವೇ ಗುಡ್ ನ್ಯೂಸ್ ಸಿಕ್ಕಂತಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ