ಧೋನಿ ಇದ್ದರೆ ತಂಡದಲ್ಲಿ ವಿರಾಟ್ ಕೊಹ್ಲಿಗೆ ಏನಾಗುತ್ತದೆ ಎಂದು ಬಹಿರಂಗಪಡಿಸಿದ ಮಾಜಿ ಕೋಚ್ ಅನಿಲ್ ಕುಂಬ್ಳೆ
ನಾಯಕತ್ವ ಎನ್ನುವುದು ಧೋನಿಗೆ ನೈಸರ್ಗಿಕವಾಗಿ ಬಂದಿದೆ. ಧೋನಿ ವಿಕೆಟ್ ಹಿಂದುಗಡೆ ನಿಂತು ಕೊಹ್ಲಿಗೆ ಕೊಡುವ ಸಲಹೆಗಳು ತಂಡಕ್ಕೆ ತುಂಬಾ ಉಪಯುಕ್ತವಾಗುತ್ತದೆ. ಇದು ಕೊಹ್ಲಿಯನ್ನು ನಾಯಕನಾಗಿ ಮತ್ತಷ್ಟು ಬೆಳೆಸುವುದಲ್ಲದೆ, ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ ಎಂದು ಅನಿಲ್ ಕುಂಬ್ಳೆ ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.