ಜೈಪುರ: ಇಲ್ಲಿನ ನಹರ್‌ಗಢ್ ಕೋಟೆ ಆವರಣದಲ್ಲಿರುವ ಮ್ಯೂಸಿಯಂನಲ್ಲಿ ಈಗಾಗಲೇ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಮಹೇಂದ್ರ ಸಿಂಗ್ ಧೋನಿ ಸೇರಿದಂತೆ 44 ಗಣ್ಯರ ಮೇಣದ ಪ್ರತಿಮೆಗಳನ್ನು ಅನಾವರಣ ಮಾಡಲಾಗಿದೆ.
ಇದೀಗ ಪ್ರವಾಸಿಗರು, ವಿಶೇಷವಾಗಿ ಮಕ್ಕಳ ಮತ್ತು ಯುವಕರ ಭೇಡಿಕೆಯಂತೆ ವಿರಾಟ್ ಕೊಹ್ಲಿ ಅವರ ಪ್ರತಿಮೆಯನ್ನು ಜೈಪುರದ ಮೇಣದ ಪ್ರತಿಮೆಗಳ ಮ್ಯೂಸಿಯಂನಲ್ಲಿ ಅನಾವರಣ ಮಾಡಲಾಗಿದೆ.
ವಿಶ್ವ ಪರಂಪರೆಯ ದಿನದಂದು ಗುರುವಾರ ಕ್ರಿಕೆಟಿಗನ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ನಗರದ ವ್ಯಾಕ್ಸ್ ಮ್ಯೂಸಿಯಂನೊಂದಿಗೆ ವಿರಾಟ್ ಕೊಹ್ಲಿ ಈಗ ಜೈಪುರದಲ್ಲಿ ಶಾಶ್ವತವಾಗಿ ಚಿರಸ್ಥಾಯಿಯಾಗಲಿದ್ದಾರೆ.
35 ಕೆಜಿ ತೂಕದ ಈ ಪ್ರತಿಮೆಯನ್ನು ಸುಮಾರು ಎರಡು ತಿಂಗಳಲ್ಲಿ ಕೆತ್ತನೆ ಮಾಡಲಾಗಿದೆ.
"ಅವರು (ಪ್ರವಾಸಿಗರು) ಕೊಹ್ಲಿಯ ಪ್ರತಿಮೆಯನ್ನು ವಸ್ತುಸಂಗ್ರಹಾಲಯದಲ್ಲಿ ಇಡಬೇಕೆಂದು ಬಲವಾದ ಅಭಿಪ್ರಾಯವನ್ನು ಹೊಂದಿದ್ದರು. ಇಂದು ವಿಶ್ವ ಪರಂಪರೆಯ ದಿನದಂದು ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ ಎಂದು ಮ್ಯೂಸಿಯಂನ ಸಂಸ್ಥಾಪಕ ನಿರ್ದೇಶಕರಾದ ಅನೂಪ್ ಶ್ರೀವಾಸ್ತವ ಹೇಳಿದ್ದಾರೆ.
ನಹರ್‌ಗಢ್ ಕೋಟೆ ಆವರಣದಲ್ಲಿರುವ ಮ್ಯೂಸಿಯಂ ಈಗಾಗಲೇ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ ಮತ್ತು ಮಹೇಂದ್ರ ಸಿಂಗ್ ಧೋನಿ ಸೇರಿದಂತೆ 44 ಗಣ್ಯರ ಮೇಣದ ಪ್ರತಿಮೆಗಳನ್ನು ಹೊಂದಿದೆ.
ವಸ್ತುಸಂಗ್ರಹಾಲಯವು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಎಪಿಜೆ ಅಬ್ದುಲ್ ಕಲಾಂ, ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಕಲ್ಪನಾ ಚಾವಾಲಾ, ಅಮಿತಾಭ್ ಬಚ್ಚನ್ ಮತ್ತು ಮದರ್ ತೆರೇಸಾ ಅವರ ಪ್ರತಿಮೆಗಳನ್ನು ಸಹ ಹೊಂದಿದೆ.