ಬೆಂಗಳೂರು: ಕಳೆದ ವರ್ಷ ಆರ್‌ಸಿಬಿ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ನಡುವಿಣ ಸ್ಪರ್ಧೆಗಿಂತ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಿನ ಜಗಳ ಜೋರಾಗಿಯೇ ಸದ್ದು ಮಾಡಿತ್ತು. ಈ ವರ್ಷ ಇಬ್ಬರು ಆಟಗಾರರು ಮುನಿಸು ಮರೆತು ಸರಿಹೋಗಿದ್ದರು ಇದೀಗ ಮತ್ತೇ ಸುದ್ದಿಗೆ ಕಾರಣವಾಗಿದೆ.
ಯಾಕೆಂದರೆ ಈ ವರ್ಷದ ಆರ್‌ಸಿಬಿ ಹಾಗೂ ಕೋಲ್ಕತಾ ನೈಟ್ ರೈಡರ್ಸ್ ನಡುವಿನ ಪಂದ್ಯಕ್ಕಿಂತ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಪರಸ್ಪರ ಅಪ್ಪಿಕೊಂಡಿದ್ದು ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಈ ಬಗ್ಗೆ ಇದೇ ಮೊದಲ ಬಾರಿ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಕಳೆದ ವರ್ಷ ಆರ್‌ಸಿಬಿ ಹಾಗೂ ಲಖನೌ ಸೂಪರ್ ಜಯಂಟ್ಸ್ ನಡುವಣ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವೆ ದೊಡ್ಡ ಜಗಳ ನಡೆದಿತ್ತು. ಈ ಬಾರಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿ ಪಂದ್ಯ ವೀಕ್ಷಣೆಗೆ ಗಂಭೀರ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಕೊಹ್ಲಿ ಹಾಗೂ ಗಂಬೀರ್ ಮುಖಾಮುಖಿಯಾಗುವ ಸಾಧ್ಯತೆಯಿಂದ ಏನಾದರೂ ನಡೆಯಬಹುದು ಎಂದು ಅಭಿಮಾನಿಗಳು ನಿರೀಕ್ಷಿಸಿದ್ದರು.
ಇನ್ನೂ ಕಳೆದ ವರ್ಷ ನಡೆದಿದ್ದ 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ವೇಳೆ ವಿರಾಟ್ ಕೊಹ್ಲಿ ಹಾಗೂ ನವೀನ್ ಉಲ್ ಹಕ್ ಮುಖಾಮುಖಿ ಮನಃಸ್ತಾಪವನ್ನು ಮರೆತು ಪಂದ್ಯದ ವೇಳೆ ಮಾತನಾಡಿ, ಅಪ್ಪಿಕೊಂಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ, ಜನರು ನಮ್ಮಿಂದ ಮಸಾಲಾ ಸಂಗತಿಗಳನ್ನು ನಿರೀಕ್ಷಿಸಿದ್ದರು. ನಾವಿಬ್ಬರೂ ನಡೆದುಕೊಂಡ ರೀತಿಯಿಂದ ಕೆಲವರು ಹೊಟ್ಟೆ ಉರ್ಕೊಂಡಿದ್ದಾರೆ ಎಂದು ಟೀಕೆ ಮಾಡುವವರಿಗೆ ಟಾಂಗ್ ನೀಡಿದರು.