ಚರ್ಚೆಗೆ ಕಾರಣವಾಯ್ತು ಕೊಹ್ಲಿ ಮಾಡಿದ ಆ ಪ್ರಯೋಗ!

ಶುಕ್ರವಾರ, 1 ಸೆಪ್ಟಂಬರ್ 2017 (08:43 IST)
ಕೊಲೊಂಬೊ: ಶ್ರೀಲಂಕಾ ವಿರುದ್ಧ ಏಕದಿನ ಸರಣಿ ಗೆದ್ದ ಮೇಲೆ ಉಳಿದ ಔಪಚಾರಿಕ ಪಂದ್ಯಗಳಿಗೆ ಹೊಸಬರಿಗೆ ಅವಕಾಶ ನೀಡುವುದಾಗಿ ನಾಯಕ ಕೊಹ್ಲಿ ಹೇಳಿದ್ದರು. ಆದರೆ ನಾಲ್ಕನೇ ಪಂದ್ಯದಲ್ಲಿ ಅವರು ಮಾಡಿದ ಒಂದು ಪ್ರಯೋಗ ಚರ್ಚೆಗೆ ಕಾರಣವಾಯ್ತು.

 
ರೋಹಿತ್ ಶರ್ಮಾ ಜತೆಗೆ 200 ರನ್ ಗಳ ಜತೆಯಾಟವಾಡಿ ಕೊಹ್ಲಿ ಔಟಾದರು. ಇದರ ಬೆನ್ನಲ್ಲೇ ನಾಲ್ಕನೇ ಕ್ರಮಾಂಕದಲ್ಲಿ ಕೆಎಲ್ ರಾಹುಲ್ ಅಥವಾ ಮನೀಶ್ ಪಾಂಡೆ ಕಣಕ್ಕಿಳಿಯಬಹುದು ಎಂಬುದು ಎಲ್ಲರ ಲೆಕ್ಕಾಚಾರವಾಗಿತ್ತು.

ಯಾಕೆಂದರೆ ಆಗ ಇನ್ನೂ 20 ಓವರ್ ಗಳ ಆಟ ಬಾಕಿಯಿತ್ತು. ರೋಹಿತ್ ಶರ್ಮಾ ಕ್ರೀಸ್ ನಲ್ಲಿದ್ದರು. ಆದರೆ ರಾಹುಲ್ ಮತ್ತು ಪಾಂಡೆಯನ್ನು ಹಿಂದಕ್ಕೆ ತಳ್ಳಿ ಕೊಹ್ಲಿ ಹಾರ್ದಿಕ್ ಪಾಂಡ್ಯರನ್ನು ಕಣಕ್ಕಿಳಿಸಿದರು. ಆದರೆ ಈ ಪ್ರಯೋಗ ಯಶಸ್ವಿಯಾಗಲಿಲ್ಲ.  19 ರನ್ ಗಳಿಗೆ ಅವರು ಔಟಾದರು.

20 ಓವರ್ ಗಳ ಆಟ ಬಾಕಿಯಿದ್ದಾಗ ಬ್ಯಾಟ್ಸ್ ಮನ್ ಗಳಿಗೆ ಅವಕಾಶ ಕೊಡದೇ ಪಿಂಚ್ ಹಿಟ್ಟರ್ ಗಳಿಗೆ ಅವಕಾಶ ಕೊಟ್ಟ ಕೊಹ್ಲಿ ನಿರ್ಧಾರ ಚರ್ಚೆಗೆ ಕಾರಣವಾಯ್ತು. ಅದೇ ಪಾಂಡ್ಯ ಕೊನೆಯ ಓವರ್ ಗಳಿದ್ದಾಗ ಬಂದಿದ್ದರೆ  ಇನ್ನಷ್ಟು ರನ್ ಗತಿ ಏರಿಸುತ್ತಿದ್ದರು. ಆದರೆ ಕೊಹ್ಲಿಯ ಅರ್ಥಹೀನ ಪ್ರಯೋಗದಿಂದಾಗಿ ಭಾರತ ಓವರ್ ಗಳಿದ್ದರೂ, ರನ್ ಗತಿ ಅತ್ಯುತ್ತಮವಾಗಿದ್ದರೂ, ವಿಕೆಟ್ ಕಳೆದುಕೊಂಡು ದಾಖಲೆಯ ಮೊತ್ತ ಪೇರಿಸುವಲ್ಲಿ ವಿಫಲವಾಯಿತು.

ಇದನ್ನೂ ಓದಿ.. ಧೋನಿಗೆ ಉಡುಗೊರೆ ಕೊಟ್ಟ ವಿರಾಟ್ ಕೊಹ್ಲಿ
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ