ಮಂಬೈ ಇಂಡಿಯನ್ಸ್ ಆಟಗಾರ ಲಸಿತ್ ಮಲಿಂಗಾಗೆ ಕ್ರಿಕೆಟ್ ನಿಂದ ಆರು ತಿಂಗಳ ನಿಷೇಧ

ಬುಧವಾರ, 28 ಜೂನ್ 2017 (08:55 IST)
ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಒಪ್ಪಿಗೆಯಿಲ್ಲದೇ ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಕ್ಕೆ ಮತ್ತು ಲಂಕಾ ಕ್ರೀಡಾ ಸಚಿವರನ್ನು ಮಂಗ ಎಂದು ಕರೆದಿದ್ದಕ್ಕೆ ಕ್ರಿಕೆಟಿಗ ಲಸಿತ್ ಮಲಿಂಗಗೆ ಆರು ತಿಂಗಳ ನಿಷೇಧ ಮತ್ತು 50 ಶೇಕಡಾ ದಂಡ ಶಿಕ್ಷೆ ವಿಧಿಸಲಾಗಿದೆ.

 
ಶ್ರೀಲಂಕಾ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಗೇರದೇ ಇದ್ದಿದ್ದಕ್ಕೆ ಅಲ್ಲಿನ ಕ್ರೀಡಾ ಸಚಿವ ದಯಸಿರಿ ಜಯಸೇಖರ ಲಂಕಾ ಕ್ರಿಕೆಟಿಗರ ಫಿಟ್ ನೆಸ್ ಲೆವೆಲ್ ನ್ನು ಪ್ರಶ್ನಿಸಿದ್ದರು. ಇದನ್ನು ಮಾಧ್ಯಮವೊಂದರಲ್ಲಿ ಮಾತನಾಡುವಾಗ ಪ್ರಶ್ನಿಸಿದ್ದ ಮಲಿಂಗಾ ಸಚಿವರನ್ನು ಕ್ರಿಕೆಟ್ ಬಗ್ಗೆ ಗೊತ್ತಿಲ್ಲ ಮಂಗ ಎಂದು ನಿಂದಿಸಿದ್ದರು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಲಂಕಾ ಕ್ರಿಕೆಟ್ ಮಂಡಳಿ ತನ್ನ ಪ್ರಮುಖ ವೇಗಿಗೆ ನಿಷೇಧದ ಶಿಕ್ಷೆ ವಿಧಿಸಿದೆ. ಆದರೂ ಮುಂಬರುವ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಅವರು ಆಡಲಿದ್ದಾರೆ. ಮಲಿಂಗಾ ಐಪಿಎಲ್ ನ ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಆಟಗಾರನೂ ಆಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ