ತಪ್ಪು ತಿಳೀಬೇಡಿ, ಯಾರ್ಕರ್ ಹೇಳಿಕೊಟ್ಟಿದ್ದು ಲಸಿತ್ ಮಲಿಂಗ ಅಲ್ಲ ಎಂದ ಜಸ್ಪ್ರೀತ್ ಬುಮ್ರಾ

ಶನಿವಾರ, 4 ಜನವರಿ 2020 (09:19 IST)
ಮುಂಬೈ: ಯಾರ್ಕರ್ ಎಸೆತ ಎಸೆಯುವುದರಲ್ಲಿ ಶ್ರೀಲಂಕಾದ ವೇಗಿ ಲಸಿತ್ ಮಲಿಂಗ ನಿಸ್ಸೀಮ. ಮುಂಬೈ ಇಂಡಿಯನ್ಸ್ ಪರ ಆಡುವ ಮಲಿಂಗ, ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾಗೂ ಯಾರ್ಕರ್ ಎಸೆತ ಕರಾರುವಾಕ್ ಆಗಿ ಎಸೆಯಲು ಹೇಳಿಕೊಟ್ಟಿದ್ದರು ಎಂದೇ ಇದುವರೆಗೆ ನಂಬಲಾಗಿತ್ತು.


ಆದರೆ ಅದನ್ನು ಬುಮ್ರಾ ನಿರಾಕರಿಸಿದ್ದಾರೆ.  ನನಗೆ ಮಲಿಂಗ ಯಾರ್ಕರ್ ಮಾತ್ರವಲ್ಲ, ಯಾವುದೇ ವಿಶೇಷ ಎಸೆತವನ್ನು ಎಸೆಯಲೂ ಹೇಳಿಕೊಟ್ಟಿಲ್ಲ. ನಾನು ಟಿವಿ, ವಿಡಿಯೋಗಳನ್ನು ನೋಡಿ ಕಲಿತುಕೊಂಡೆ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಬುಮ್ರಾ ಯಾರ್ಕರ್ ಮಾತ್ರವಲ್ಲ, ಚೆನ್ನಾಗಿ ಬೌಲಿಂಗ್ ಮಾಡಲು ನನಗೆ ಸಹಾಯ ಮಾಡಿದ್ದು, ಟಿವಿ, ವಿಡಿಯೋಗಳು, ಹಲವರ ಟೀಕೆ-ಟಿಪ್ಪಣಿಗಳು ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ