ನಾಯಕತ್ವ ಮುಂದುವರಿಕೆಯನ್ನು ಬಿಸಿಸಿಐ ನಿರ್ಧರಿಸುತ್ತದೆ: ಧೋನಿ

ಬುಧವಾರ, 8 ಜೂನ್ 2016 (15:09 IST)
ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾದಲ್ಲಿ ಏಕ ದಿನ ಅಂತಾರಾಷ್ಟ್ರೀಯ ಸರಣಿಗಳಲ್ಲಿ ಸತತ ಸೋಲಿನ ಬೆನ್ನ ಹಿಂದೆ ಸ್ವದೇಶದಲ್ಲಿ 2016ರ ಐಸಿಸಿ ವಿಶ್ವ ಟ್ವೆಂಟಿ20ಯಲ್ಲಿ ಅಪಯಶಸ್ಸಿನ ಜತೆ ಮಹೇಂದ್ರ ಸಿಂಗ್ ಧೋನಿ ಫಾರಂ ಕೊರತೆ ಎದುರಿಸಿದ್ದಾರೆ.

ಇದರಿಂದ ಧೋನಿ ಕೆಳಕ್ಕಿಳಿದು ವಿರಾಟ್ ಕೊಹ್ಲಿಗೆ ಮೂರು ಮಾದರಿ ಆಟಗಳಲ್ಲಿ ನಾಯಕತ್ವ ಹಸ್ತಾಂತರ ಮಾಡುವುದಕ್ಕೆ ಇದು ಸಕಾಲವೇ ಎಂಬ ಬಗ್ಗೆ ಚರ್ಚೆಗೆ ಆಸ್ಪದ ಕಲ್ಪಿಸಿದೆ.  ಧೋನಿ 2014ರ ಡಿಸೆಂಬರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾದ ಬಳಿಕ ಕೊಹ್ಲಿ ಸುದೀರ್ಘ ಮಾದರಿ ಕ್ರಿಕೆಟ್‌ಗೆ ನಾಯಕತ್ವ ವಹಿಸಿದ್ದಾರೆ. ವಿಕೆಟ್ ಕೀಪರ್ , ಬ್ಯಾಟ್ಸ್‌ಮನ್ ಧೋನಿ ಆಟದ ಕಿರು ಮಾದರಿಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ.
 
ಧೋನಿ ಭಾರತದ ಯಶಸ್ವಿ ನಾಯಕರಾಗಿದ್ದು, ಭಾರತವನ್ನು 50 ಓವರು ಮತ್ತು ಟ್ವೆಂಟಿ 20 ವಿಶ್ವ ಪ್ರಶಸ್ತಿಗಳಲ್ಲಿ ಮುನ್ನಡೆಸಿದ್ದು, ಟೆಸ್ಟ್ ಕ್ರಮಾಂಕದಲ್ಲಿ ಭಾರತ ಟಾಪ್ ಸ್ಥಾನದಲ್ಲಿದ್ದಾಗ ಕೂಡ ನಾಯಕತ್ವದಲ್ಲಿದ್ದರು. ಆದರೆ ಇತ್ತೀಚೆಗೆ ಧೋನಿ ಫಾರಂ ಕಳೆದುಕೊಂಡಿರುವುದರಿಂದ ಅವರ ನಾಯಕತ್ವದ ಸ್ಥಾನಕ್ಕೆ ಸಂಚಕಾರ ತಂದಿದೆ.  ತಂಡದ ನಿರ್ಗಮಿಸಿದ ನಿರ್ದೇಶಕ ರವಿ ಶಾಸ್ತ್ರಿ ಕಳೆದ ವಾರ ಬದಲಾವಣೆಗೆ ಸಲಹೆ ಮಾಡಿದ್ದು, ಭಾರತದ ಕ್ರಿಕೆಟ್‌ ಹಿತಾಸಕ್ತಿಗೆ ಪೂರಕವಾಗಿ ಕೊಹ್ಲಿಗೆ ನಾಯಕತ್ವ ನೀಡಬೇಕೆಂದು ಸಲಹೆ ಮಾಡಿದ್ದರು.
 
ಸಹಜವಾಗಿ ಧೋನಿ ಜಿಂಬಾಬ್ವೆಗೆ ನಿರ್ಗಮಿಸುವ ಮುಂಚೆ ಪತ್ರಕರ್ತರ ಈ ಪ್ರಶ್ನೆಯನ್ನು ಎದುರಿಸಿದರು. ಆದರೆ ಇದಕ್ಕೆ ಉತ್ತರಿಸಿದ ಧೋನಿ, ಇದು ಬಿಸಿಸಿಐ ತೆಗೆದುಕೊಳ್ಳುವ ನಿರ್ಧಾರವಾಗಿದ್ದು, ನನಗೆ ನಿರ್ಧರಿಸುವುದಕ್ಕೆ ಆಗುವುದಿಲ್ಲ ಎಂದು ಧೋನಿ ಉತ್ತರಿಸಿದರು.
 
ಆದರೆ ಹೊಸ ಹೆಡ್ ಕೋಚ್‌ಗೆ ತಂಡ ಹುಡುಕುತ್ತಿರುವ ಸಂದರ್ಭದಲ್ಲಿ ಧೋನಿ ಸಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದರು. ಬಿಸಿಸಿಐ ತನ್ನ 9 ಅಂಶಗಳ ಮಾನದಂಡದಲ್ಲಿ  ಹಿಂದಿ ಮಾತನಾಡುವ ಅಭ್ಯರ್ಥಿಗೆ ಕರೆ ನೀಡಿದ್ದರೆ, ಭಾಷೆಗಿಂತ ಹೆಚ್ಚಾಗಿ ದೇಶದ ಸಂಸ್ಕೃತಿ ಅರ್ಥ ಮಾಡಿಕೊಳ್ಳುವ ವ್ಯಕ್ತಿಯನ್ನು ಕೋಚ್ ಹುದ್ದೆಗೆ ನೇಮಿಸಿದರೆ ತಂಡದ ಜತೆ ಹೊಂದಾಣಿಕೆಯಾಗುತ್ತದೆ ಎಂದು ಧೋನಿ ಹೇಳಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 

ವೆಬ್ದುನಿಯಾವನ್ನು ಓದಿ