ಜಿಂಬಾಬ್ವೆ ಪ್ರವಾಸ ಮಾಡುವುದು ಅಥವಾ ಬಿಡುವುದು ಧೋನಿ ನಿರ್ಧಾರಕ್ಕೆ

ಶುಕ್ರವಾರ, 20 ಮೇ 2016 (12:35 IST)
ಸಂದೀಪ್ ಪಾಟೀಲ್ ನೇತೃತ್ವದಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿಯು ಜೂನ್ 11-20ರವರೆಗೆ ಜಿಂಬಾಬ್ವೆಯ ಕಿರು ಪ್ರವಾಸಕ್ಕೆ  ಸೀಮಿತ ಓವರುಗಳ ನಾಯಕ ಧೋನಿ ಲಭ್ಯವಿರುತ್ತಾರೊ ಇಲ್ಲವೋ ಎನ್ನುವುದನ್ನು ಧೋನಿಯ ನಿರ್ಧಾರಕ್ಕೆ ಬಿಡಲು ನಿರ್ಧರಿಸಿದೆ.
 
ಬೆಂಚ್ ಬಲವನ್ನು ಪರೀಕ್ಷಿಸುವುದಕ್ಕಾಗಿ ಐವರು ಆಯ್ಕೆದಾರರು ಬಹುತೇಕ ಹಿರಿಯ ಕಾಯಂ ಆಟಗಾರರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದ್ದು,  ಹೊಸ ನೋಟದ ಕಿರಿಯರ ತಂಡವನ್ನು ಕಳಿಸಲು ನಿರ್ಧರಿಸಿದೆ. ಆದರೆ ಆಯ್ಕೆ ಸಮಿತಿಯು ಧೋನಿ ಅವರಿಗೆ ಮುಂದಿನ ವರ್ಷ ಮಾರ್ಚ್‌ವರೆಗೆ ಯಾವುದೇ ಅಂತಾರಾಷ್ಟ್ರೀಯ ಪಂದ್ಯಗಳಿಲ್ಲದಿರುವುದನ್ನು ಗಮನಿಸಿ ವಿನಾಯಿತಿ ನೀಡಿದೆ.  ಮುಂದಿನ ಮಾರ್ಚ್‌ವರೆಗೆ 17 ಟೆಸ್ಟ್‌ ಪಂದ್ಯಗಳನ್ನು ಭಾರತ ಆಡಲಿದೆ.
 
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್ ಅವರಿಗೆ ರೆಸ್ಟ್ ನೀಡಲಾಗಿದ್ದು, ಕೆಲವು ಹಿರಿಯ ಆಟಗಾರರು ಪ್ರವಾಸಕ್ಕೆ ಲಭ್ಯರಿದ್ದಾರೆ. ಧೋನಿ ಆಡದಿದ್ದರೆ, ಅಜಿಂಕ್ಯ ರಹಾನೆ ಅವರು ತಂಡವನ್ನು ಮುನ್ನಡೆಸುವುದಕ್ಕೆ ಆದ್ಯತೆ ನೀಡಲಾಗುತ್ತದೆ. 

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ..

ವೆಬ್ದುನಿಯಾವನ್ನು ಓದಿ